ಲಖನೌ: ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಉಗ್ರನನ್ನು ಸಶಸ್ತ್ರ ಸೀಮಾ ಬಲ ಮಹತ್ವದ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ನೇಪಾಳದ ಸನೌಲಿ ಗಡಿಯಲ್ಲಿ 34 ವರ್ಷದ ನಾಸೀರ್ ಅಹಮದ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್ಎಸ್ಬಿ ತಿಳಿಸಿದೆ. ಗಡಿ ನಸುಳುವ ಉದ್ದೇಶದೊಂದಿಗೆ ಬಸ್ಸೊಂದರಲ್ಲಿ ಬಂದು ಹೊಂಚು ಹಾಕುತ್ತಿದ್ದ ವೇಳೆ ಅಹಮದ್ ನನ್ನು ವಶಕ್ಕೆ ಪಡೆದಿದ್ದಾರೆ.
2003ರಿಂದ ಪಾಕಿಸ್ತಾನ ಅಹಮದ್ ತರಬೇತಿ ಪಡೆದು ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಯಲು ಸಂಚು ಹೂಡಿದ್ದ ಎಂದು ಭದ್ರತಾ ಪಡೆಗಳು ತಿಳಿಸಿವೆ.