ರಾನ್ಸಮ್ ವೇರ್ ಸೈಬರ್ ದಾಳಿ ಎಚ್ಚರಿಕೆ ಗಂಟೆ: ಮೈಕ್ರೋಸಾಫ್ಟ್

ಸುಮಾರು 150 ರಾಷ್ಟ್ರಗಳಿಗೆ ತಗುಲಿರುವ ರಾನ್ಸಮ್ ವೇರ್ ಹ್ಯಾಕ್ ನ್ನು ಸರ್ಕಾರಗಳು ಎಚ್ಚರಿಕೆಯ ಗಂಟೆಯೆಂದು ಪರಿಗಣಿಸಬೇಕು ಎಂದು ಮೈಕ್ರೋಸಾಫ್ಟ್ ಹೇಳಿದೆ.
ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್
ವಾಷಿಂಗ್ ಟನ್: ಸುಮಾರು 150 ರಾಷ್ಟ್ರಗಳಿಗೆ ತಗುಲಿರುವ ರಾನ್ಸಮ್ ವೇರ್ ಹ್ಯಾಕ್ ನ್ನು ಸರ್ಕಾರಗಳು ಎಚ್ಚರಿಕೆಯ ಗಂಟೆಯೆಂದು ಪರಿಗಣಿಸಬೇಕು ಎಂದು ಮೈಕ್ರೋಸಾಫ್ಟ್ ಹೇಳಿದೆ. 
ರಾನ್ಸಮ್ ವೇರ್ ಬಳಕೆ ಮಾಡಿ ಸೈಬರ್ ದಾಳಿ ನಡೆಸಿರುವುದರ ಬಗ್ಗೆ ಮೈಕ್ರೋಸಾಫ್ಟ್ ನ ಅಧ್ಯಕ್ಷ ಹಾಗೂ ಮುಖ್ಯ ಕಾನೂನು ಅಧಿಕಾರಿ ಬ್ರಾಡ್ ಸ್ಮಿತ್ ಹೇಳಿಕೆ ಬಿಡುಗಡೆ ಮಾಡಿದ್ದು, ಸರ್ಕಾರಗಳು ಭದ್ರತಾ ವಿಷಯಗಳ ಬಗ್ಗೆ ಕಂಪ್ಯೂಟರ್ ಗಳಲ್ಲಿ ಮಾಹಿತಿ ಸಂಗ್ರಹಿಸಿಡುವ ವಿಧಾನವನ್ನು ಟೀಕಿಸಿದ್ದಾರೆ. 
ಸೋಮವಾರ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಲಿದ್ದು, ಮತ್ತೊಂದು ಸುತ್ತಿನ ರಾನ್ಸಮ್ ವೇರ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಕೆ ನೀಡಿದೆ. ಕಳೆದ ವಾರ ಉಂತಾಗಿದ್ದ ಸೈಬರ್ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸ ವೈರಸ್ ಗಳು ಎದುರಾಗದಂತೆ ತಜ್ಞರು ಕೆಲಸ ಮಾಡುತ್ತಿದ್ದಾರೆ. 
ರಾನ್ಸಮ್ ವೇರ್ ಬಳಕೆ ಮಾಡಿ ಹ್ಯಾಕ್ ಮಾಡಿ ಯೂಸರ್ ಫೈಲ್ಸ್ ಗಳಿಗೆ ಪ್ರವೇಶ ಪಡೆಯಬೇಕಾದರೆ 300 ಡಾಲರ್ ಪಾವತಿಸುವಂತೆ ಬೇಡಿಕೆ ಇಟ್ಟಿತ್ತು. ಆದರೆ ವಾರಾಂತ್ಯದ ದಿನವಾದ ಭಾನುವಾರದಂದು ವೈರಸ್ ನ ಹರಡುವಿಕೆ ಕಡಿಮೆಯಾಗಿದೆ. ಆದರೆ ಸೋಮವಾರ ಉದ್ಯೋಗಿಗಳು ಮತ್ತೆ ಕೆಲಸಕ್ಕೆ ಹಾಜರಾಗುವುದರಿಂದ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ವರೆಗೂ 150 ರಾಷ್ಟ್ರಗಳಲ್ಲಿ 200,000 ಕಂಪ್ಯೂಟರ್ ಗಳು ರಾನ್ಸಮ್ ವೇರ್ ದಾಳಿಗೆ ಗುರಿಯಾಗಿವೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com