ಟ್ರಂಪ್ ದೇಶದ ಸಿಇಒ, ಅವರು ಯಾರನ್ನು ಬೇಕಾದರೂ ವಜಾ ಮಾಡಬಹುದು: ನಿಕ್ಕಿ ಹ್ಯಾಲೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿದ್ದು, ಅವರು...
ಅಮೆರಿಕಾದ ವಿಶ್ವಸಂಸ್ಥೆ ರಾಯಭಾರಿ ನಿಕ್ಕಿ ಹ್ಯಾಲೆ
ಅಮೆರಿಕಾದ ವಿಶ್ವಸಂಸ್ಥೆ ರಾಯಭಾರಿ ನಿಕ್ಕಿ ಹ್ಯಾಲೆ
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿದ್ದು, ಅವರು ಬಯಸಿದರೆ ಯಾರನ್ನು ಬೇಕಾದರೂ ಕೆಲಸದಿಂದ ವಜಾಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಮೆರಿಕಾದ ವಿಶ್ವಸಂಸ್ಥೆ ರಾಯಭಾರಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ಅಮೆರಿಕಾದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್(ಎಫ್ ಬಿಐ) ನಿರ್ದೇಶಕ ಹುದ್ದೆಯಿಂದ ಕಳೆದ ಮಂಗಳವಾರ ಜೇಮ್ಸ್ ಕೊಮಿ ಅವರನ್ನು  ಡೊನಾಲ್ಡ್ ಟ್ರಂಪ್ ತೆಗೆದು ಹಾಕಿದ್ದರು.
ಅಧ್ಯಕ್ಷರು ದೇಶದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು. ಅವರು ಇಚ್ಛಿಸಿದಲ್ಲಿ ಯಾರನ್ನು ಬೇಕಾದರೂ ಹುದ್ದೆಯಿಂದ ತೆಗೆಯಬಹುದು. ಟ್ರಂಪ್ ಅವರ ದೇಶಿ ಯೋಜನಾ ನಿರ್ಧಾರಗಳ ಕುರಿತು ವಿವರಿಸುವಾಗ ಎಬಿಸಿ ನ್ಯೂಸ್ ಮುಖ್ಯಸ್ಥರ ಜೊತೆ ದಿಸ್ ವೀಕ್ ಗೆ ನೀಡಿದ ಸಂದರ್ಶನದ ವೇಳೆ ನಿಕ್ಕಿ ಈ ರೀತಿ ನುಡಿದರು.
ಇದು ಅಧ್ಯಕ್ಷರ ಕಾರ್ಯವಾಗಿದೆ. ಅವರು ಹೇಳಿದ್ದನ್ನು ಮಾಡಿ ತೋರಿಸುವುದರಿಂದ ಜನರಿಗೆ ಅದು ಸರಿಕಾಣುತ್ತಿಲ್ಲವೇನೋ ಎಂದರು.ತಮ್ಮಿಂದ ಡೊನಾಲ್ಡ್ ಟ್ರಂಪ್ ಅವರು ನಿಷ್ಠೆಯನ್ನು ಬಯಸುತ್ತಿದ್ದಾರೆಯೇ ಎಂದು ಕೇಳಿದ್ದಕ್ಕೆ ಇಲ್ಲ ಎಂದು ನಿಕ್ಕಿ ಹ್ಯಾಲೆ ಉತ್ತರಿಸಿದರು.
ದಕ್ಷಿಣ ಕ್ಯಾರೊಲಿನಾದ ಗವರ್ನರ್ ಆಗಿದ್ದಾಗ ನಿಷ್ಠೆ ಮತ್ತು ನಂಬಿಕೆ ತಮಗೆ ಮುಖ್ಯವಾಗಿತ್ತು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com