ಮುಸ್ಲಿಂ ರಾಷ್ಟ್ರಗಳಿಗೆ ಪ್ರಯಾಣ ವೀಸಾ ನಿಷೇಧ: ಟ್ರಂಪ್ ನಿರ್ಧಾರಕ್ಕೆ ಯುಎಸ್ ಸರ್ಕ್ಯೂಟ್ ಕೋರ್ಟ್ ತಡೆ

ಆರು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಪ್ರವಾಸಿ ವೀಸಾಕ್ಕೆ ನಿಷೇಧ ಹೇರಿರುವ ಅಮೆರಿಕಾ ಅಧ್ಯಕ್ಷ...
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಆರು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಪ್ರವಾಸಿ ವೀಸಾಕ್ಕೆ ನಿಷೇಧ ಹೇರಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮ ಧಾರ್ಮಿಕ ಅಸಹಿಷ್ಣುತೆ, ತಾರತಮ್ಯ ನೀತಿಯನ್ನು ತೋರಿಸುತ್ತಿದೆ ಎಂದು ಯುಎಸ್ ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್ ತೀರ್ಪು ನೀಡಿದೆ. ಇದೀಗ ತೀರ್ಪಿನ್ನು ಪ್ರಶ್ನಿಸಿ ಟ್ರಂಪ್ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ನಡೆಸಲು ಮುಂದಾಗಿದೆ.
ನಿನ್ನೆ ಮತ ನೀಡಿದ ಯುಎಸ್ ಸರ್ಕ್ಯುಟ್ ಕೋರ್ಟ್ ಆಫ್ ಅಪೀಲ್ಸ್, ಪ್ರವಾಸಿ ವೀಸಾ ನಿಷೇಧ ಸಂವಿಧಾನವನ್ನು ಉಲ್ಲಂಘಿಸುತ್ತದೆ. ಇರಾನ್, ಲಿಬಿಯಾ, ಸೊಮಾಲಿಯಾ, ಸೂಡನ್, ಸಿರಿಯಾ ಮತ್ತು ಯೆಮೆನ್ ದೇಶಗಳ ಜನರಿಗೆ ವೀಸಾಕ್ಕೆ ಕತ್ತರಿ ಹಾಕಿರುವ  ನೀತಿ ಜನರ ಮೂಲಭೂತ ಹಕ್ಕನ್ನು ಮುರಿಯುತ್ತದೆ ಎಂದು ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಕೂಡ ಯುಎಸ್ ಸರ್ಕ್ಯುಟ್ ಕೋರ್ಟ್  ಎತ್ತಿಹಿಡಿದಿದೆ.
ವರ್ಜಿನಿಯಾ ಮೂಲದ 4ನೇ ಸರ್ಕ್ಯೂಟ್ ನ್ಯಾಯಾಲಯ ಅಮೆರಿಕಾದ ಪರಿಷ್ಕೃತ ಪ್ರವಾಸಿ ವೀಸಾ ಕುರಿತಂತೆ ಮೊದಲ ಬಾರಿಗೆ ಕಳೆದ ಮಾರ್ಚ್ ನಲ್ಲಿ ತೀರ್ಪು ನೀಡಿ ಪ್ರವಾಸಿ ವೀಷಾ ನಿಷೇಧವನ್ನು ಖಂಡಿಸಿತ್ತು. ಹವೈಯ ಫೆಡರಲ್ ನ್ಯಾಯಾಧೀಶರು ತಡೆಹಿಡಿದ ನಂತರ  ಸಾನ್ ಫ್ರಾನ್ಸಿಸ್ಕೋದ 9ನೇ ಯುಎಸ್ ಸರ್ಕ್ಯೂಟ್  ಪರಿಷ್ಕೃತ ಪ್ರಯಾಣ ವೀಸಾ ನಿಷೇಧವನ್ನು ವಿರೋಧಿಸಿತ್ತು. 
ಇದೀಗ ಟ್ರಂಪ್ ಆಡಳಿತದ ಮಹತ್ವದ ಮುಸ್ಲಿಂ ರಾಷ್ಟ್ರಗಳಿಗೆ ಪ್ರಯಾಣ ವೀಸಾ ನಿಷೇಧ ಭವಿಷ್ಯ ಸುಪ್ರೀಂ ಕೋರ್ಟ್ ಅಂಗಳದಲ್ಲಿ ನಿಂತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com