ಲಂಡನ್: ಕಳೆದ ವಾರ ಮ್ಯಾಂಚೆಸ್ಟರ್ ನಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು ಬ್ರಿಟನ್ ನಲ್ಲಿ ಭಯೋತ್ಪಾದಕ ದಾಳಿಯ ಆತಂಕ ಮತ್ತಷ್ಟು ಹೆಚ್ಚಿದೆ. ಈ ನಡುವೆ ಅಲ್ಲಿನ ಗುಪ್ತಚರ ಇಲಾಖೆ ಬ್ರಿಟನ್ ನಲ್ಲಿ ಇನ್ನೂ 23 ಸಾವಿರ ಭಯೋತ್ಪಾದಕರಿದ್ದಾರೆ ಎಂಬ ಅಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದೆ.
ಬ್ರಿಟನ್ ನಾದ್ಯಂತ 23,000 ಭಯೋತ್ಪಾದಕರು ಸಕ್ರಿಯರಾಗಿದ್ದು, ಈ ಪೈಕಿ 3000 ಭಯೋತ್ಪಾದಕರಿಗೆ ದೇಶಕ್ಕೆ ಅತ್ಯಂತ ಹೆಚ್ಚು ಅಪಾಯ ಕಾದಿದ್ದು ವಿಚಾರಣೆಯನ್ನೂ ಎದುರಿಸುತ್ತಿದ್ದಾರೆ ಇನ್ನು 20000 ಭಯೋತ್ಪಾದಕರ ವಿರುದ್ಧವೂ ಈ ಹಿಂದೆ ವಿಚಾರಣೆ ನಡೆದಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಇದೇ ವೇಳೆ ಮ್ಯಾಂಚೆಸ್ಟರ್ ಪೊಲೀಸರು ಆತ್ಮಾಹುತಿ ದಾಳಿ ನಡೆದಾಗಿನ ಸಿಸಿಟಿವಿ ಚಿತ್ರಗಳನ್ನು ಬಿಡುಗಡೆ ಮಾಡಿದ್ದು ದಾಳಿ ನಡೆಸಿದ ಉಗ್ರನ ಚಿತ್ರವೂ ಸೆರೆಯಾಗಿದೆ. ದಾಳಿಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದ್ದು 14 ಪ್ರದೇಶಗಳಲ್ಲಿ ಇನ್ನೂ ಶೋಧಕಾರ್ಯಾಚರಣೆ ನಡೆಸಲಾಗುತ್ತಿದ್ದು 11 ಜನರನ್ನು ವಶಕ್ಕೆ ಪಡೆಯಲಾಗಿದೆ.