ಜರ್ಮನಿ: ಬೇಸರದಿಂದ ಹೊರಬರಲು 106 ರೋಗಿಗಳ ಪ್ರಾಣ ತೆಗೆದ ನರ್ಸ್!

ವೃತ್ತಿ ಬೇಸರದಿಂದ ಹೊರಬರಲು 106 ರೋಗಿಗಳಿಗೆ ಮಾರಣಾಂತಿಕ ಡ್ರಗ್ಸ್ ನೀಡಿದ ನರ್ಸ್ ಅವರ ಸಾವಿಗೆ ಕಾರಣವಾಗಿರುವ ವಿಚಿತ್ರ ಘಟನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬರ್ಲಿನ್: ವೃತ್ತಿ ಬೇಸರದಿಂದ ಹೊರಬರಲು 106 ರೋಗಿಗಳಿಗೆ ಮಾರಣಾಂತಿಕ ಡ್ರಗ್ಸ್ ನೀಡಿದ ನರ್ಸ್ ಅವರ ಸಾವಿಗೆ ಕಾರಣವಾಗಿರುವ ವಿಚಿತ್ರ ಘಟನೆ ಜರ್ಮನಿಯ ಬರ್ಲಿನ್ ನಲ್ಲಿ ನಡೆದಿದೆ. 
41 ವರ್ಷದ ನೀಲ್ಸ್ ಹೊಗೆಲ್ ಎಂಬಾತ 2015ರಲ್ಲಿಯೇ ಇಬ್ಬರು ರೋಗಿಗಳ ಕೊಲೆ ಪ್ರಕರಣ ಮತ್ತು ನಾಲ್ಕು ಕೊಲೆ ಯತ್ನ ಪ್ರಕರಣ ಹಾಗೂ ತೀವ್ರ ನಿಘಾ ಘಟಕದಲ್ಲಿದ್ದ ರೋಗಿಗಳಿಗೆ ದೈಹಿಕವಾಗಿ ಹಾನಿ ಉಂಟು ಮಾಡಿದ್ದ ಕೇಸೇ ಗೆ ಸಂಬಂಧಿಸಿದಂತೆ ಆರೋಪಿಯಾಗಿ ಜೈಲು ಸೇರಿದ್ದಾನೆ.
1999 ಮತ್ತು 2005 ರಲ್ಲಿ ಎರಡು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದ ಹೊಗೆಲ್ 16 ಜನರ ಸಾವಿಗೆ ಕಾರಣವಾಗಿರುವುದು ತನಿಖೆಯಲ್ಲಿ ಸಾಬೀತಾಗಿದೆ. 90ಕ್ಕಿಂತ ಹೆಚ್ಚು ರೋಗಿಗಳ ಜೀವಕ್ಕೆ ಅಪಾಯ ತಂದ ಆರೋಪ ಆತನ ಮೇಲಿದೆ.
ರೋಗಿಗಳಿಗೆ ಮಾರಕ ಔಷಧಗಳನ್ನು ನೀಡಿ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದ. ನಂತರ ತಾನೇ ವೈದ್ಯರಂತೆ ಪ್ರತಿರೋಧಕ ಔಷಧಗಳ ಇಂಜೆಕ್ಷನ್ ನೀಡುತ್ತಿದ್ದ. ಅವುಗಳಿಂದ ರೋಗಿಗಳು ಗುಣಮುಖರಾದರೆ ಸಂತೋಷಗೊಂಡು ಬೆನ್ನು ತಟ್ಟಿಕೊಳ್ಳುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಗೆ ಹೃದಯ ವೈಫಲ್ಯ ಅಥವಾ ರಕ್ತ ಚಲನೆ ಮರಗಟ್ಟುವಂತೆ ಇಂಜೆಕ್ಷನ್ ನೀಡುತ್ತಿದ್ದರಿಂದ ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗುವಂತೆ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ನೀಲ್ಸ್ ಹೊಗೆಲ್ ಕರ್ತವ್ಯದಲ್ಲಿದ್ದಾಗಲೇ ಹೆಚ್ಚಿನ ಜನ ಸಾವನ್ನಪ್ಪಿದ್ದರಿಂದ ವೈದ್ಯರಿಗೆ ಅನುಮಾನ ಉಂಟಾಗಿ ಆತನ ವಿರುದ್ಧ ಕೇಸ್ ದಾಖಲಿಸಲಾಗಿತ್ತು, ಆದರೆ ಆತನಿಗೆ ಶೀಘ್ರವಾಗಿ ಶಿಕ್ಷೆ ವಿಧಿಸುವ ಕೆಲಸ ಮಾತ್ರ ಇನ್ನೂ ಆಗಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com