ಏಷ್ಯಾ ಪ್ರವಾಸದ ವೇಳೆ ಟ್ರಂಪ್‌ ಯುದ್ಧಕ್ಕಾಗಿ ಬೇಡಿಕೊಂಡಿದ್ದಾರೆ: ಉತ್ತರ ಕೋರಿಯಾ

ಮೊದಲ ಏಷ್ಯಾ ಪ್ರವಾಸದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉತ್ತರ ಕೋರಿಯಾವನ್ನು ನಿರ್ನಾಮ ಮಾಡಲು ಯುದ್ಧದೊಂದಿಗೆ....
ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಸಿಯೋಲ್‌: ಮೊದಲ ಏಷ್ಯಾ ಪ್ರವಾಸದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉತ್ತರ ಕೋರಿಯಾವನ್ನು ನಿರ್ನಾಮ ಮಾಡಲು ಯುದ್ಧದೊಂದಿಗೆ ಕೈಜೋಡಿಸುವಂತೆ ಅಲ್ಲಿನ ರಾಷ್ಟ್ರಗಳನ್ನು ಬೇಡಿಕೊಂಡಿದ್ದಾರೆ ಎಂದು ಶನಿವಾರ ಉತ್ತರ ಕೋರಿಯಾ ಹೇಳಿಕೊಂಡಿದೆ.
ಏಷ್ಯಾ ಪ್ರವಾಸದ ವೇಳೆ ಟ್ರಂಪ್‌ ವಿಶ್ವ ಶಾಂತಿಯನ್ನು ಹದಗೆಡಿಸುವ ಓರ್ವ ವಿದ್ವಂಸಕನಾಗಿ ಕಂಡು ಬಂದಿದ್ದರು, ಅವರು ಕೋರಿಯನ್‌ ದ್ವೀಪಗಳ ಮೇಲೆ ಅಣು ದಾಳಿ ನಡೆಸಲು ಏಷ್ಯಾ ರಾಷ್ಟ್ರಗಳ ಸಹಕಾರ ಕೋರಿದ್ದಾರೆ ಎಂದು ಉತ್ತರ ಕೋರಿಯಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉತ್ತರ ಕೋರಿಯಾ ಕೆಲ ತಿಂಗಳ ಹಿಂದೆ ಪ್ಯೋಂಗ್ಯಾಂಗ್‌ನಲ್ಲಿ ಆರು ವಿನಾಶಕಾರಿ ಅಣು ಬಾಂಬ್‌ ಪರೀಕ್ಷೆ ನಡೆಸಿದ ಬೆನ್ನಲ್ಲೇ, ಕೋರಿಯ ದ್ವೀಪದಲ್ಲಿ ಯುದ್ಧ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಟ್ರಂಪ್‌ ಕಳೆದ ಏಷ್ಯಾ ಪ್ರವಾಸದ ವೇಳೆ ಉತ್ತರ ಕೋರಿಯಾ ವಿರುದ್ಧ ಹೋರಾಡಲು ಕರೆ ನೀಡಿದ್ದರು. ಅಲ್ಲದೆ ಕೆಲ ದಿನಗಳ ಹಿಂದೆ ಅಮೆರಿಕದ ಶಕ್ತಿಯನ್ನು ಕೀಳಾಗಿ ನೋಡಬೇಡಿ ಎಂದು ಉತ್ತರ ಕೋರಿಯಾಗೆ ಟ್ರಂಪ್‌ ಎಚ್ಚರಿಕೆ ನೀಡಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉತ್ತರ ಕೋರಿಯ ನಮ್ಮನ್ನು ಯಾರೂ ಬೆದರಿಸಲು ಸಾಧ್ಯವಿಲ್ಲ ಅಥವಾ ನಮ್ಮ ಪ್ರಗತಿಯನ್ನು ಕುಂಠಿತಗೊಳಿಸಲು ಯಾವುದೇ ರಾಷ್ಟ್ರದಿಂದಲೂ ಸಾಧ್ಯವಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com