ಇಂದಿರಾ ಗಾಂಧಿ ನಂತರ 36 ವರ್ಷಗಳ ಬಳಿಕ ಫಿಲಿಫೈನ್ಸ್‌ಗೆ ಪ್ರಧಾನಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಫಿಲಿಫೈನ್ಸ್ ಪ್ರವಾಸಕೈಗೊಂಡಿದ್ದು ಇಂದು ಸಂಜೆ ಮನಿಲಾಗೆ ತೆರಳಿದ್ದಾರೆ...
ನರೇಂದ್ರ ಮೋದಿ
ನರೇಂದ್ರ ಮೋದಿ
ಮನಿಲಾ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಫಿಲಿಫೈನ್ಸ್ ಪ್ರವಾಸಕೈಗೊಂಡಿದ್ದು ಇಂದು ಸಂಜೆ ಮನಿಲಾಗೆ ತೆರಳಿದ್ದಾರೆ. 
15ನೇ ಏಷಿಯಾನ್-ಇಂಡಿಯಾ ಶೃಂಗಸಭೆ ಹಾಗೂ 12ನೇ ಪೂರ್ವ ಏಷ್ಯಾದ ಶೃಂಗಸಭೆ ಫಿಲಿಫೈನ್ಸ್ ನಲ್ಲಿ ನಾಳೆಯಿಂದ ಆರಂಭಗೊಳ್ಳಲಿದ್ದು ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಫಿಲಿಫೈನ್ಸ್ ಗೆ ತೆರಳಿದ್ದಾರೆ. 
ಇನ್ನು ನಾಳೆ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಹಲವು ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ. ಜತೆಗೆ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ರಾಷ್ಟ್ರಗಳ ಮೈತ್ರಿ ಬಗ್ಗೆಯೂ ಉಭಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. 
ಮೋದಿ ಮಂಗಳವಾರ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ ಬುಲ್ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ವಿಯೆಟ್ನಾಂ ಪ್ರಧಾನಿ ನ್ಗುಯೆನ್ ಕ್ಸುವಾನ್ ಫುಸ್, ನ್ಯೂಜಿಲೆಂಡ್ ಪ್ರಧಾನಿ ಜಕಿಂಡಾ ಅರ್ಡೆರ್ನ್ ಹಾಗೂ ಬ್ರೂನಿ ಸುಲ್ತಾನ್ ಹಾಸನಲ್ ಅವರನ್ನೂ ಮೋದಿ ಭೇಟಿ ಮಾಡಿ ಚರ್ಚಿಸಲಿದ್ದಾರೆ. 
ಇನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನಂತರ ಬರೋಬ್ಬರಿ 36 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಫಿಲಿಫೈನ್ಸ್ ಗೆ ಭೇಟಿ ನೀಡುತ್ತಿರುವುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com