ಕ್ರಿಸ್ತನಲ್ಲ, ನಿಮ್ಮನ್ನು ಕಾಪಾಡುವುದು ಅಧ್ಯಕ್ಷ ಕ್ಸಿ ಜಿನ್ ಪಿಂಗ್: ಕ್ರೈಸ್ತರಿಗೆ ಚೀನಾ ಅಧಿಕಾರಿಗಳ ಕಿವಿಮಾತು!

ಬಡತನವನ್ನು ನಿವಾರಿಸುವ ಸರ್ಕಾರಿ ಸೌಲಭ್ಯಗಳು ಸಿಗಬೇಕೆಂದರೆ ಜೀಸಸ್ ಕ್ರೈಸ್ತನ ಬದಲಿಗೆ....
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್
ಬೀಜಿಂಗ್: ಬಡತನವನ್ನು ನಿವಾರಿಸುವ ಸರ್ಕಾರಿ ಸೌಲಭ್ಯಗಳು ಸಿಗಬೇಕೆಂದರೆ ಜೀಸಸ್ ಕ್ರೈಸ್ತನ ಬದಲಿಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಭಾವಚಿತ್ರವನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಬೇಕು ಎಂದು ಆಗ್ನೇಯ ಚೀನಾದ ಕ್ರೈಸ್ತರಿಗೆ ಆದೇಶ ನೀಡಲಾಗಿದೆ. 
ಜೀಸಸ್ ದೇವರು ನಿಮ್ಮ ಕಷ್ಟ, ಬಡತನ, ಅನಾರೋಗ್ಯಗಳನ್ನು ನಿವಾರಿಸಲು ಸಾಧ್ಯವಿಲ್ಲ, ಚೀನಾದ ಕಮ್ಯೂನಿಸ್ಟ್ ಪಕ್ಷ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ಆಗ್ನೇಯ ಚೀನಾದ ಗ್ರಾಮೀಣ ಯುಗನ್ ಕೌಂಟಿ ಪ್ರದೇಶದಲ್ಲಿನ ಕ್ರಿಸ್ತಿಯನ್ನರಿಗೆ ಸ್ಥಳೀಯ ಅಧಿಕಾರಿಗಳು ಮನವರಿಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಜೀಸಸ್ ಕ್ರೈಸ್ತರ ಭಾವಚಿತ್ರಕ್ಕೆ ಬದಲಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಫೋಟೋಗಳನ್ನು ಮನೆಗಳಲ್ಲಿ ಇಟ್ಟುಕೊಳ್ಳುವಂತೆ ಸೂಚಿಸುತ್ತಿದ್ದಾರಂತೆ.
ಚೀನಾದ ಅತಿ ದೊಡ್ಡ ಸರೋವರ ಪೊಯಂಗ್ ನ ತೀರದಲ್ಲಿರುವ ಜಿಯಾಂಗ್ಕ್ಸಿ ಪ್ರಾಂತ್ಯದಲ್ಲಿರುವ ಬಡ ಕೌಂಟಿಯಾಗಿರುವ ಯುಗನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಸ್ತಿಯನ್ ಸಮುದಾಯದವರು ವಾಸಿಸುತ್ತಿದ್ದು, ಬಡತನ ಕೂಡ ಹೆಚ್ಚಾಗಿದೆ. 
ಇಲ್ಲಿ 1 ಲಕ್ಷದಲ್ಲಿ ಶೇಕಡಾ 11ಕ್ಕಿಂತ ಅಧಿಕ ಮಂದಿ ದೇಶದ ಅಧಿಕೃತ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿ ಬದುಕುತ್ತಿದ್ದಾರೆ. ಅವರಲ್ಲಿ ಶೇಕಡಾ 10ರಷ್ಟು ಜನ ಕ್ರೈಸ್ತರು ಎಂದು ಅಧಿಕೃತ ಅಂಕಿಅಂಶಗಳನ್ನು ನೀಡುತ್ತದೆ ದಕ್ಷಿಣ ಚೀನಾದ ಮಾರ್ನಿಂಗ್ ಪೋಸ್ಟ್.
ಕ್ರಿಸ್ತಿಯನ್ ಧರ್ಮದ ಬೋಧನೆಗಳು ಮತ್ತು ಫೋಟೋಗಳನ್ನು ತೋರಿಸುವ 624 ಚಿತ್ರಗಳನ್ನು ಉದ್ದೇಶಪೂರ್ವಕವಾಗಿ ಯುಗನ್ ಕೌಂಟಿಯ ಗ್ರಾಮಸ್ಥರು ತೆಗೆದು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ 453 ಫೋಟೋಗಳನ್ನು ಹಾಕಿಕೊಂಡಿದ್ದಾರೆ ಎಂದು ಯುಗನ್ ಕೌಂಟಿಯ ಸಾಮಾಜಿಕ ಮಾಧ್ಯಮ ಖಾತೆಯೊಂದು ತಿಳಿಸುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಈ ನಡೆ ಚೀನಾದ ಮೊದಲ ಕಮ್ಯೂನಿಸ್ಟ್ ನಾಯಕ ಮಾವೊ ಜೆಡೊಂಗ್  ಅವರ ವ್ಯಕ್ತಿತ್ವವನ್ನು ಹೋಲುತ್ತದೆ. ಈ ಹಿಂದೆ ಅವರ ಫೋಟೋ ಕೂಡ ಪ್ರತಿ ಮನೆ ಮನೆಗಳಲ್ಲಿ ಇಡಲಾಗುತ್ತಿತ್ತು.
ಕ್ಸಿ ಜಿನ್ ಪಿಂಗ್ ಆಡಳಿತದಡಿಯಲ್ಲಿ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷ 2020ರ ವೇಳೆಗೆ ದೇಶದಿಂದ ಬಡತನವನ್ನು ನಿರ್ಮೂಲನೆ ಮಾಡುವುದು ಸರ್ಕಾರದ ಗುರಿಯೆಂದು ಹೇಳುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಪ್ರಚಾರ ದೇಶದ ಪ್ರಭಾವಶಾಲಿ ನಾಯಕನ ರಾಜಕೀಯ ಜೀವನದಲ್ಲಿ ಮಹತ್ವವಾಗಿರುವುದಲ್ಲದೆ ಸಮಾಜದ ಮೂಲಸ್ತರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ನಿಯಂತ್ರಣದಲ್ಲಿಟ್ಟುಕೊಳ್ಳಲು ಇದು ಪ್ರಮುಖ ಅಂಶವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com