ಜನರಿಲ್ಲದ ಜಾಗಕ್ಕೆ ಹೋಗಿ ಇದು 'ದೀಕ್ಷಿತ್ ಸಾಮ್ರಾಜ್ಯ' ಎಂದು ಘೋಷಿಸಿಕೊಂಡ ಭಾರತೀಯ

ಇಂದೋರ್ ಮೂಲದ ಸುಯಾಶ್ ದೀಕ್ಷಿತ್ ಎಂಬಾತ ಈಜಿಪ್ಟ್ ಮತ್ತು ಸೂಡಾನ್ ನಡುವೆ ಇರುವ ಜನರಿಲ್ಲದ ಜಾಗಕ್ಕೆ ಹೋಗಿ ಇದು ದೀಕ್ಷಿತ್ ಸಾಮ್ರಾಜ್ಯ ಎಂದು...
ಸುಯಾಶ್ ದೀಕ್ಷಿತ್
ಸುಯಾಶ್ ದೀಕ್ಷಿತ್
ಸುಡಾನ್: ಇಂದೋರ್ ಮೂಲದ ಸುಯಾಶ್ ದೀಕ್ಷಿತ್ ಎಂಬಾತ ಈಜಿಪ್ಟ್ ಮತ್ತು ಸೂಡಾನ್ ನಡುವೆ ಇರುವ ಜನರಿಲ್ಲದ ಜಾಗಕ್ಕೆ ಹೋಗಿ ಇದು ದೀಕ್ಷಿತ್ ಸಾಮ್ರಾಜ್ಯ ಎಂದು ಘೋಷಿಸಿಕೊಂಡಿದ್ದಾನೆ. 
ಇದು ದೀಕ್ಷಿತ್ ಸಾಮ್ರಾಜ್ಯ. ಈ ದೇಶಕ್ಕೆ ತಾನೇ ಅರಸ. ಇದು ತನ್ನ ಸಾಮ್ರಾಜ್ಯ ಎಂದು ಘೋಷಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ವಿಶ್ವಸಂಸ್ಥೆಗೂ ಪತ್ರ ಬರೆದಿದ್ದು ತನಗೆ ಹಾಗೂ ತನ್ನ ಸಾಮ್ರಾಜ್ಯಕ್ಕೆ ಮಾನ್ಯತೆ ಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದಾನೆ. 
24 ವರ್ಷದ ಸುಯಾಶ್ ದೀಕ್ಷಿತ್ ಉದ್ಯಮಿಯಾಗಿದ್ದು ಈಜಿಪ್ಟ್ ಮತ್ತು ಸೂಡಾನ್ ಮಧ್ಯೆ ಬರುವ ಬೀರ್ ತಾವಿಲ್ ಎಂದು ಕರೆಯಲ್ಪಡುವ ಈ ಜಾಗವನ್ನು ದೀಕ್ಷಿತ್ ಸಾಮ್ರಾಜ್ಯ ಎಂದು ಕರೆದುಕೊಂಡಿದ್ದಾನೆ. ಮಾನವರು ವಾಸಿಸಬಹುದಾದ ಹಾಗೂ ಈವರೆಗೂ ಇದು ಯಾವುದೇ ದೇಶಕ್ಕೆ ಸೇರ್ಪಡದ ಜಗತ್ತಿನ ಏಕೈಕ ಸ್ಥಳ ಎನಿಸಿಕೊಂಡಿದೆ. ಬೀರ್ ತಾವಿಲ್ ಗೆ ಹೋಗಲು 319 ಕಿ.ಮೀ ದುರ್ಗಮ ಮರುಭೂಮಿ ಹಾದಿ ಕ್ರಮಿಸಿರುವೆ. 800 ಚದರ ಮೈಲು ಭೂಭಾಗವನ್ನು ಇದು ಹೊಂದಿದೆ. 
ಒಂದು ಸಾಮ್ರಾಜ್ಯ ತನ್ನದು ಎಂದು ಹೇಳಿಕೊಳ್ಳಬೇಕು ಎಂದರೆ ಅಲ್ಲಿ ಒಂದು ಸಸಿ ನೆಟ್ಟು ಅದಕ್ಕೆ ನೀರು ಹಾಕಬೇಕು ಎಂದು ನಾಗರಿಕತೆಗಳ ಇತಿಹಾಸ ಹೇಳುತ್ತದೆ. ಆ ಪ್ರಕಾರ ನಾನು ಸಸಿ ನೆಟ್ಟು ನೀರು ಹಾಕಿದ್ದೇನೆ ಎಂದು ದೀಕ್ಷಿತ್ ಹೇಳಿಕೊಂಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com