ಹರ್ಯಾಣದ ಮನುಷಿ ಚಿಲ್ಲರ್ 2017 ರ ವಿಶ್ವ ಸುಂದರಿ: 17 ವರ್ಷಗಳ ನಂತರ ಭಾರತಕ್ಕೆ ಮಿಸ್ ವರ್ಲ್ಡ್ ಕಿರೀಟ

ಹರ್ಯಾಣದ ವೈದ್ಯಕೀಯ ವಿದ್ಯಾರ್ಥಿನಿ, ಮಿಸ್ ಇಂಡಿಯಾ ಮನುಷಿ ಛಿಲ್ಲಾರ್ ಗೆ ವಿಶ್ವಸುಂದರಿ ಪಟ್ಟ ಒಲಿದಿದೆ.
ಮಾನುಷಿ ಛಿಲ್ಲಾರ್
ಮಾನುಷಿ ಛಿಲ್ಲಾರ್
ಸನ್ಯಾ: ಹರ್ಯಾಣದ ವೈದ್ಯಕೀಯ ವಿದ್ಯಾರ್ಥಿನಿ, ಮಿಸ್ ಇಂಡಿಯಾ ಮನುಷಿ ಚಿಲ್ಲರ್  ಗೆ ವಿಶ್ವಸುಂದರಿ ಪಟ್ಟ ಒಲಿದಿದೆ. 
ಸುಮಾರು 108 ರಾಷ್ಟ್ರಗಳ ಸುಂದರಿಯರಿಗೆ ಸ್ಪರ್ಧೆಯೊಡ್ಡಿದ್ದ ಭಾರತದ ಮನುಷಿ ಚಿಲ್ಲರ್  ವಿಶ್ವಸುಂದರಿಗೆ 2016 ರ ವಿಶ್ವ ಸುಂದರಿ ಸ್ಟಿಫೇನಿ ಡೆಲ್ ವಲ್ಲೆ ವಿಶ್ವಸುಂದರಿಯ ಕಿರೀಟ ತೊಡಿಸಿದ್ದಾರೆ. 1966 ರಲ್ಲಿ ಭಾರತದ ರೀಟಾ ಫರಿಯಾ ವಿಶ್ವ ಸುಂದರಿಯ ಪಟ್ಟಕ್ಕೇರುವ ಮೂಲಕ ವಿಶ್ವಸುಂದರಿಯಾದ ಮೊದಲ ಏಷ್ಯಾದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಾದ 3 ದಶಕಗಳ ನಂತರ ಐಶ್ವರ್ಯಾ ರೈ 1994 ರಲ್ಲಿ ವಿಶ್ವಸುಂದರಿ ಪಟ್ಟಕ್ಕೇರಿದ್ದರು. ಬಳಿಕ 2000 ರಲ್ಲಿ ಪ್ರಿಯಾಂಕ ಚೋಪ್ರಾ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದರು. ಈಗ 17 ವರ್ಷಗಳ ನಂತರ ಭಾರತದ ಯುವತಿ ಮನುಷಿ ಚಿಲ್ಲರ್  ವಿಶ್ವಸುಂದರಿಯಾಗಿ ಆಯ್ಕೆಗೊಂಡಿದ್ದಾರೆ. 
ಚೀನಾದಲ್ಲಿ ನಡೆದ ಸನ್ಯಾ ಸಿಟಿಯಲ್ಲಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ಮನುಷಿ ಚಿಲ್ಲರ್  ಅವರನ್ನು ವಿಶ್ವಸುಂದರಿಯೆಂದು ಘೋಷಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com