ಈ ಬಾರಿ ಟೈಮ್ಸ್ ವರ್ಷದ ವ್ಯಕ್ತಿ ನಾನಾಗಲಾರೆ!: ಡೊನಾಲ್ಡ್ ಟ್ರಂಪ್

ಕಳೆದ ಸಾಲಿನಲ್ಲಿ ಟೈಮ್ಸ್ ನಿಯತಕಾಲಿಕದ ವರ್ಷದ ವ್ಯಕ್ತಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ಮತ್ತೆ ನಾನು ವರ್ಷದ ವ್ಯಕ್ತಿ ಆಗಲಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಕಳೆದ ಸಾಲಿನಲ್ಲಿ ಟೈಮ್ಸ್ ನಿಯತಕಾಲಿಕದ ವರ್ಷದ ವ್ಯಕ್ತಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ಮತ್ತೆ ನಾನು ವರ್ಷದ ವ್ಯಕ್ತಿ ಆಗಲಾರೆ. ಈ ಸ್ಪರ್ಧೆಯಿಂದ ನಾನು ಹಿಂದೆ ಸರಿಯುತ್ತಿದ್ದೇನೆ ಎನ್ನುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
"ಟೈಮ್ ಮ್ಯಾಗಜೀನ್ ಬಹುಶಃ ಸತತ ಎರಡನೇ ವರ್ಷವೂ ನನ್ನನ್ನೇ ವರ್ಷದ ವ್ಯಕ್ತಿ ಎಂದು ಆಯ್ಕೆ ಮಾಡಲು ಬಯಸಿದೆ. ಆದರೆ, ನಾನು ಈ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ"  ಎಂದು ಟ್ರಂಪ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 
ಈ ಪ್ರಶಸ್ತಿಗೆ ಆಯ್ಕೆಗೊಂದವರು ಟೈಮ್ಸ್ ನಿಯತಕಾಲಿಕಕ್ಕೆ ವಿಶೇಷ ಸಂದರ್ಶನ ನೀಡಬೇಕು, ಫೋಟೋ ಶೂಟ್ ಗಳಲ್ಲಿ ಭಾಗವಹಿಸಬೇಕು. ಟ್ರಂಪ್ ಗೆ ಈ ಎರಡೂ ಇಷ್ಟವಿಲ್ಲದ ಕಾರಣ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾಗಿ ಹೇಳಿಕೊಂಡಿದ್ದಾರೆ.
ಟ್ರಂಪ್ ಹೇಳಿಕೆಗೆ ಟೈಮ್ಸ್  ಸಹ ಪ್ರತಿಕ್ರಿಯೆ ನೀಡಿದ್ದು ವರ್ಷದ ವ್ಯಕ್ತಿ ಎಂದು ನಾವು ಯಾರನ್ನು ಆಯ್ಕೆ ಮಾಡುತ್ತೇವೆ, ಹೇಗೆ ಆಯ್ಕೆ ಮಾಡುತ್ತೇವೆ ಎನ್ನುವುದನ್ನು ಟ್ರಂಪ್ ಹೇಳಿದ್ದು ಸರಿಯಲ್ಲ. ಯಾವ ವ್ಯಕ್ತಿಯನ್ನು ಆಯ್ಕೆ ಮಾಡುವವರೆಗೂ ಟೈಮ್ಸ್ ಆ ವಿಚಾರವನ್ನು ಎಲ್ಲಿಯೂ ಪ್ರಸ್ತಾಪ್ಸಿರುವುದಿಲ್ಲ ಎಂದಿದೆ. ಇನ್ನು ಟ್ರಂಪ್ ಈ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ವ್ಯಾಪಕ ಟಿಕೆಗಳು ಬಂದಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ 2016ರಲ್ಲಿ ಹಿಲರಿ ಕ್ಲಿಂಟನ್ ಅವರನ್ನು ಹಿಂದಿಕ್ಕಿ ಟೈಮ್ಸ್ ವರ್ಷದ ವ್ಯಕ್ತಿ ಎಂದು ಆಯ್ಕೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com