ದಾಕಾ: 2009 ರ ದಂಗೆಯ ವೇಳೆ ನಡೆದ ಹತ್ಯಾಕಾಂಡ ಪ್ರಕರಣ ಸಂಬಂಧ 139 ಮಂದಿಯ ಮರಣ ದಂಡನೆ, 146 ಜನರಿಗೆ ಜೀವಾವಧಿ ಶಿಕ್ಷೆಯನ್ನು ಬಾಂಗ್ಲಾ ಹೈ ಕೋರ್ಟ್ ಇಂದು ಎತ್ತಿ ಹಿಡಿದಿದೆ. ಗಡಿ ರಕ್ಷಕರ ಪ್ರಧಾನ ಕಚೇರಿಯಲ್ಲಿ ನಡೆದ ಕ್ರೂರ ಹತ್ಯೆಗಾಗಿ ಆಗಿನ ಬಾಂಗ್ಲಾದೇಶ ರೈಫಲ್ಸ್ (ಬಿಡಿಆರ್) ನ 152 ಆರೋಪಿತ ಸೈನಿಕರ ಮರಣದಂಡನೆ ಶಿಕ್ಷೆಗೆ ಸಂಬಂಧಿಸಿ ಬಾಂಗ್ಲಾ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.