ನಟಿ ಮೇಘನ್‌ ಮಾರ್ಕೆಲ್ ಜತೆ ಬ್ರಿಟನ್‌ ರಾಜಕುಮಾರ ಹ್ಯಾರಿ ನಿಶ್ಚಿತಾರ್ಥ, ಮುಂದಿನ ವರ್ಷ ಮದುವೆ

ಬ್ರಿಟನ್‌ ರಾಜಕುಮಾರ ಹ್ಯಾರಿ ಅವರು ನಟಿ ಮೇಘನ್‌ ಮಾರ್ಕೆಲ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, 2018ರಲ್ಲಿ ಮದುವೆಯಾಗಲಿದ್ದಾರೆ...
ಹ್ಯಾರಿ, ಮೇಘನ್ ಮಾರ್ಕೆಲ್‌
ಹ್ಯಾರಿ, ಮೇಘನ್ ಮಾರ್ಕೆಲ್‌
Updated on
ಲಂಡನ್‌: ಬ್ರಿಟನ್‌ ರಾಜಕುಮಾರ ಹ್ಯಾರಿ ಅವರು ನಟಿ ಮೇಘನ್‌ ಮಾರ್ಕೆಲ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, 2018ರಲ್ಲಿ ಮದುವೆಯಾಗಲಿದ್ದಾರೆ ಎಂದು ಸೋಮವಾರ ಬ್ರಿಟನ್ ನ ರಾಜ ಮನೆತನ ತಿಳಿಸಿದೆ.
ಹ್ಯಾರಿ ಅವರ ತಂದೆ ಪ್ರಿನ್ಸ್ ಚಾರ್ಲ್ಸ್‌ ಕಚೇರಿಯಿಂದ ಈ ಮಾಹಿತಿ ಹೊರ ಬಿದ್ದಿದ್ದು, ಇದೇ ತಿಂಗಳ ಆರಂಭದಲ್ಲಿ ನಿಶ್ಚಿತಾರ್ಥವಾಗಿದೆ. 36 ವರ್ಷದ ಮಾರ್ಕೆಲ್‌, ರಾಣಿ ಎಲಿಜಬೆತ್‌–2 ಅವರನ್ನು ಮತ್ತು ಹ್ಯಾರಿ, ಮಾರ್ಕೆಲ್‌ ಅವರ ತಂದೆ–ತಾಯಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಬ್ರಿಟನ್ ರಾಜ ಮನೆತನದ ಐದನೇ ರಾಜಕುಮಾರ, 33 ವರ್ಷದ ಹ್ಯಾರಿ, ಜನಪ್ರಿಯ ಟಿವಿ ಧಾರಾವಾಹಿ ‘ಸ್ಯೂಟ್‌’, 'ಫ್ರಿಂಜ್'ನಲ್ಲಿ ಅಭಿನಯಿಸಿದ್ದ 36 ವರ್ಷದ ನಟಿ. ವಿಚ್ಛೇದಿತೆ ಮೇಘನ್ ಮಾರ್ಕೆಲ್‌ ಅವರ ಕೈಹಿಡಿಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com