ಪ್ರತಿಭಟನೆಗೆ ಮಣಿದ ಪಾಕ್ ಕಾನೂನು ಸಚಿವ: ರಾಜೀನಾಮೆ ಸಲ್ಲಿಕೆ

ಕಳೆದ 3 ವಾರಗಳಿಂದ ಇಸ್ಲಾಮಿಕ್ ಮೂಲಭೂತವಾದಿಗಳು ನಡೆಸುತ್ತಿರುವ ಪ್ರತಿಭಟನೆಗೆ ಮಣಿದು ಪಾಕಿಸ್ತಾನದ ಕಾನೂನು ಸಚಿವ ಝಹೀದ್ ಹಮೀದ್ ರಾಜೀನಾಮೆ ನೀಡಿದ್ದಾರೆ.
ಪಾಕಿಸ್ತಾನ ಕಾನೂನು ಸಚಿವ
ಪಾಕಿಸ್ತಾನ ಕಾನೂನು ಸಚಿವ
ಇಸ್ಲಾಮಾಬಾದ್: ಕಳೆದ 3 ವಾರಗಳಿಂದ ಇಸ್ಲಾಮಿಕ್ ಮೂಲಭೂತವಾದಿಗಳು ನಡೆಸುತ್ತಿರುವ ಪ್ರತಿಭಟನೆಗೆ ಮಣಿದು ಪಾಕಿಸ್ತಾನದ ಕಾನೂನು ಸಚಿವ ಝಹೀದ್ ಹಮೀದ್ ರಾಜೀನಾಮೆ ನೀಡಿದ್ದಾರೆ. 
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಾನೂನು ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಪ್ರಕಟಿಸಿವೆ. ಹಮೀದ್ ರಾಜೀನಾಮೆ ನೀಡುತ್ತಿದ್ದಂತೆಯೇ ಪಾಕಿಸ್ತಾನದ ಇಸ್ಲಾಮಿಕ್ ಮೂಲಭೂತವಾದಿಗಳು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ನಮ್ಮ ಪ್ರಮುಖ ಬೇಡಿಕೆ ಈಡೇರಿದೆ, ಆದ್ದರಿಂದ ನಾವು ಪ್ರತಿಭಟನೆಯನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು  ತೆಹ್ರೀಕ್-ಐ-ಖತ್ಮ-ಐನಬುವ್ವಾತ್  ತೆಹ್ರೀಕ್-ಐ-ಲಬಬೈಕ್ ಯಾ ರಸೂಲ್ ಅಲ್ಲಾಹ್, ಸುನ್ನಿ ತೆಹ್ರೀಕ್ ಪಾಕಿಸ್ತಾನ್ ಮುಂತಾದ ಸಂಘಟನೆಗಳ ಸದಸ್ಯರು ತಿಳಿಸಿದ್ದಾರೆ.
ಚುನಾವಣಾ ಕಾಯ್ದೆಗೆ ತಿದ್ದುಪಡಿ ತಂದು ಪ್ರತಿಜ್ಞಾ ವಿಧಿ ಬದಲಾಯಿಸಿದ್ದ ಕಾನೂನು ಸಚಿವರ ನಡೆಗೆ ತೀವ್ರ ಖಂಡನೆ, ಕಾನೂನು ಸಚಿವರ ರಾಜೀನಾಮೆಗೆ ಒತ್ತಾಯಿಸಿ ಇಸ್ಲಾಮಿಕ್ ಮೂಲಭೂತವಾದಿಗಳು ಪ್ರತಿಭಟನೆ ನಡೆಸುತ್ತಿದ್ದರು. ಹಿಂಸಾಚಾರಕ್ಕೆ ತಿರುಗಿದ್ದ ಪ್ರತಿಭಟನೆಯಲ್ಲಿ  6 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿತ್ತು 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com