ತೈಲ ಉತ್ಪಾದನೆಯನ್ನು 139,000 ಬ್ಯಾರಲ್ ಗಳಷ್ಟು ಕಡಿಮೆಗೊಳಿಸಲಿರುವ ಯುಎಇ

ಸಂಯುಕ್ತ ಅರಬ್ ಸಂಸ್ಥಾನ(ಯುಎಇ) ತೈಲ ಉತ್ಪಾದನೆಯನ್ನು ಪ್ರತಿ ದಿನ 139,000 ಬ್ಯಾರಲ್ ಗಳಷ್ಟು ಕಡಿಮೆಗೊಳಿಸುವುದಾಗಿ ಅಲ್ಲಿನ ಇಂಧನ ಸಚಿವ ಸುಹೈಲ್ ಅಲ್-ಮಝ್ರಾಯ್ ತಿಳಿಸಿಇದ್ದಾರೆ.
ಯುಎಇ
ಯುಎಇ
ದುಬೈ: ಸಂಯುಕ್ತ ಅರಬ್ ಸಂಸ್ಥಾನ(ಯುಎಇ) ತೈಲ ಉತ್ಪಾದನೆಯನ್ನು ಪ್ರತಿ ದಿನ 139,000 ಬ್ಯಾರಲ್ ಗಳಷ್ಟು ಕಡಿಮೆಗೊಳಿಸುವುದಾಗಿ ಅಲ್ಲಿನ ಇಂಧನ ಸಚಿವ ಸುಹೈಲ್ ಅಲ್-ಮಝ್ರಾಯ್ ತಿಳಿಸಿಇದ್ದಾರೆ. 
ನವೆಂಬರ್ ತಿಂಗಳಿನಿಂದ ತೈಲ ಉತ್ಪಾದನೆಯ ಪ್ರಮಾಣ ಕಡಿಮೆಗೊಳ್ಳಲಿದ್ದು, ತೈಲ ರಫ್ತು ಮಾಡುವ ರಾಷ್ಟ್ರಗಳ(ಒಪಿಇಸಿ) ನಿರ್ಧಾರದ ಹಿನ್ನೆಲೆಯಲ್ಲಿ ಸಂಯುಕ್ತ ಅರಬ್ ಸಂಸ್ಥಾನ ಈ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಅರಬ್ ನ ಸರ್ಕಾರಿ ಸ್ವಾಮ್ಯದ ಅಬ್ದು ಧಾಬಿ ರಾಷ್ಟ್ರೀಯ ತೈಲ ಸಂಸ್ಥೆ (ಎಡಿಎನ್ಒಸಿ) ಒಪಿಇಸಿ ನಿರ್ಧಾರದ ಪ್ರಕಾರ ತೈಲ ರಫ್ತು ಮಾಡುವ ರಾಷ್ಟ್ರಗಳಲ್ಲಿ ತೈಲೋತ್ಪಾದನೆಯನ್ನು ಕಡಿಮೆ ಮಾಡುವ ಹಿನ್ನೆಲೆಯಲ್ಲಿ ತನ್ನ ಪಾಲನ್ನೂ ನೀಡಲು ಅರಬ್ ಪ್ರತಿ ದಿನ  139,000 ಬ್ಯಾರಲ್ ನಷ್ಟು ತೈಲ ಉತ್ಪಾದನೆಯನ್ನು ಕಡಿಮೆ ಮಾಡುತ್ತಿದೆ. 
ನವೆಂಬರ್ ನಲ್ಲಿ ಕಚ್ಚಾ ತೈಲ ಉತ್ಪಾದನೆಯನ್ನು ಶೇ.15 ರಷ್ಟು ಕಡಿಮೆ ಮಾಡಬೇಕು ಎಂದು ಎಡಿಎನ್ ಒಸಿ ನಿರ್ಧರಿಸಲಾಗಿದೆ ಎಂದು ಸುಹೈಲ್ ಅಲ್-ಮಝ್ರಾಯ್ ತಿಳಿಸಿದ್ದಾರೆ. ಈ ಹಿಂದೆ ಒಪಿಇಸಿ ಸದಸ್ಯರು 6 ತಿಂಗಳವರೆಗೆ 1.8 ಮಿಲಿಯನ್ ಬ್ಯಾರಲ್ ಗಳಷ್ಟು ತೈಲ ಉತ್ಪಾದನೆಯನ್ನು ಕಡಿಮೆಗೊಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com