ಮೂವರು ಸಂಶೋಧಕರಿಗೆ 2017ನೇ ಸಾಲಿನ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ

ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಅಮೆರಿಕಾ, ಇಂಗ್ಲೆಂಡ್ ಮತ್ತು ಸ್ವಿಡ್ಜರ್ಲ್ಯಾಂಡ್...
ನೊಬೆಲ್ ಪ್ರಶಸ್ತಿ
ನೊಬೆಲ್ ಪ್ರಶಸ್ತಿ
ಸ್ಟಾಕ್ ಹೊಮ್: ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಅಮೆರಿಕಾ, ಇಂಗ್ಲೆಂಡ್ ಮತ್ತು ಸ್ವಿಡ್ಜರ್ಲ್ಯಾಂಡ್ ನ ಮೂವರು ಸಂಶೋಧಕರಿಗೆ ಈ ವರ್ಷ ರಸಾಯನ ಶಾಸ್ತ್ರ ವಿಭಾಗದಲ್ಲಿ ನೊಬೆಲ್ ಬಹುಮಾನ ಸಂದಿದೆ.
1.1 ದಶಲಕ್ಷ ಡಾಲರ್ ಮೊತ್ತದ ಪ್ರಶಸ್ತಿಯನ್ನು ಲೌಸನ್ನೆ ವಿಶ್ವ ವಿದ್ಯಾಲಯದ ಸಂಶೋಧಕ ಜಾಕ್ವೆಸ್ ಡಬೊಚೆಟ್, ನ್ಯೂಯಾರ್ಕ್ ನ ಕೊಲಂಬಿಯಾ ವಿಶ್ವ ವಿದ್ಯಾಲಯದ ಜೋಕಿಮ್ ಫ್ರಾಂಕ್ ಮತ್ತು ಬ್ರಿಟನ್ ನ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದ ರಿಚರ್ಡ್ ಹೆಂಡರ್ಸನ್ ಹಂಚಿಕೊಂಡಿದ್ದಾರೆ. 
ಕ್ರೈಯೋ-ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಎಂದು ಕರೆಯಲ್ಪಡುವ ಇವರ ಸಂಶೋಧನೆಯ ವಿಧಾನದಲ್ಲಿ ಜೈವಿಕ ಅಣುಗಳನ್ನು ಸ್ಥಗಿತಗೊಳಿಸಿ ಮಧ್ಯ-ಚಲನೆ ಮತ್ತು ದೃಷ್ಟಿಗೋಚರ ಪ್ರಕ್ರಿಯೆಗಳು ನಡೆಸಲು ಸಂಶೋಧಕರಿಗೆ ಅವಕಾಶ ಮಾಡಿಕೊಡುತ್ತದೆ ಎಂದು ರಾಯಲ್ ಸ್ವೀಡನ್ ನ ವಿಜ್ಞಾನ ಸಂಸ್ಥೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com