ಲಾಸ್ ವೇಗಾಸ್ ಶೂಟೌಟ್: ಸಾವಿರಾರು ಸಾವು ತಡೆದ ಮುಂಬೈ ದಾಳಿಯ ಒಳನೋಟ!

ವಾರಗಳ ಹಿಂದಷ್ಟೇ ಲಾಸ್ ವೇಗಾಸ್ ನಲ್ಲಿ ನಡೆದ ಶೂಟೌಟ್ ಪ್ರಕರಣದ ವೇಳೆ ಲಾಸ್ ವೇಗಾಸ್ ಪೋಲಿಸ್ ಅಧಿಕಾರಿಗಳು ತ್ವರಿತ-ಚಿಂತನೆ ....
ಲಾಸ್ ವೇಗಾಸ್ ಶೂಟೌಟ್
ಲಾಸ್ ವೇಗಾಸ್ ಶೂಟೌಟ್
ಲಾಸ್'ವೇಗಾಸ್: ವಾರಗಳ ಹಿಂದಷ್ಟೇ ಲಾಸ್ ವೇಗಾಸ್ ನಲ್ಲಿ ನಡೆದ ಶೂಟೌಟ್ ಪ್ರಕರಣದ ವೇಳೆ ಲಾಸ್ ವೇಗಾಸ್ ಪೋಲಿಸ್ ಅಧಿಕಾರಿಗಳು ತ್ವರಿತ-ಚಿಂತನೆ ಮತ್ತು ಮುಂಬೈ ದಾಳಿಯ ಒಳನೋಟ ಸಾವಿರಾರು ಜನರನ್ನು ಸಾವಿನ ದವಡೆಯಿಂದ ಪಾರು ಮಾಡಿದೆ.
2008ರ ಮುಂಬೈ ದಾಳಿಯ ಮಾದರಿಯಲ್ಲೇ ದುಷ್ಕರ್ಮಿಯೊಬ್ಬ ಹೋಟೆಲ್ ವೊಂದರಲ್ಲಿ ಅಡಗಿ ಕುಳಿತು ಕ್ಯಾಸಿನೋ ಸಂಗೀತಗೋಷ್ಠಿ ಆಸ್ವಾದಿಸುತ್ತಿದ್ದ ಸಂಗೀತ ಪ್ರೇಮಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಿ, 58 ಮಂದಿಯನ್ನು ಬಲಿ ತೆಗೆದುಕೊಂಡಿದ್ದ.
ಅಕ್ಟೋಬರ್ 1ರಂದು ನಡೆದ ಸಾಮೂಹಿಕ ಗುಂಡಿನ ದಾಳಿಯ ಘಟನೆಯನ್ನು ಮೆಲಕುಹಾಕಿದ ಲಾಸ್ ವೇಗಾಸ್ ಮೆಟ್ರೊಪೊಲಿಟನ್ ಪೊಲೀಸ್ ಇಲಾಖೆಯ ಮುಖ್ಯಸ್ಥ(ಶರೀಫ್) ಜೋಸೆಫ್ ಲ್ಯಾಂಬೊರ್ಡೊ ಅವರು, ಅಂದು ರಾತ್ರಿ 64 ವರ್ಷದ ದೊಡ್ಡ ಗ್ಯಾಂಬ್ಲರ್ ಆಗಿದ್ದ ಸ್ಟೀಫನ್​ಪ್ಯಾಡಕ್, 22 ಸಾವಿರ ಜನರಿಂದ ಸಂಗೀತಗೋಷ್ಠಿಯ ಮೇಲೆ ಶಕ್ತಿಶಾಲಿ ಗನ್ ನಿಂದ ಗುಂಡಿನ ಮಳೆ ಸುರಿಸುತ್ತಿದ್ದ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳ ಒಂದು ಸಣ್ಣ ತಂಡ ಗುಂಡಿನ ದಾಳಿ ನಡೆಸುತ್ತಿದ್ದ ಎಂ ಬೇ ಹೋಟೆಲ್ ಅನ್ನು ಸುತ್ತವರಿದರು. ಅಲ್ಲದೆ ಕೆಲವೇ ನಿಮಿಷಗಳಲ್ಲಿ ಹೋಟೆಲ್ ನ 32ನೇ ಮಹಡಿಯಲ್ಲಿದ್ದ ಗನ್ ಮ್ಯಾನ್ ಕೊಠಡಿ ತಲುಪಿದ್ದರು. ಸ್ವಲ್ಪ ತಡವಾಗಿದ್ದರೂ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದಿದ್ದಾರೆ.
ನಮ್ಮ ತಂಡ ವಿಶೇಷ ತರಬೇತಿ ಪಡೆದಿದ್ದರಿಂದಲೇ ಅವರು ಅಷ್ಟು ಬೇಗ ಅಲ್ಲಿಗೆ ತಲುಪಲು ಸಾಧ್ಯವಾಯಿತು. ಅಲ್ಲದೆ ಅವರು ಬೇಗ ಹೋಗಿ ಸಾವಿರಾರು ಸಾವನ್ನು ತಪ್ಪಿಸಿದ್ದಾರೆ. ಇದನ್ನು ಅಮೆರಿಕ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಲ್ಯಾಂಬೊರ್ಡೊ ಅವರು ನಿನ್ನೆ ಸಿಬಿಎಸ್ 60 ಮಿನಿಟ್ಸ್ ಗೆ ತಿಳಿಸಿದ್ದಾರೆ.
ಇನ್ನು ಮುಂಬೈ ಉಗ್ರ ದಾಳಿಯ ನಂತರ ತಾವು ಮುಂಬೈನ ತಾಜ್ ಹೋಟೆಲ್ ಮತ್ತು ಇತರೆ ಸ್ಥಳಗಳಿಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಲ್ಯಾಂಬೊರ್ಡೊ ಅವರು, ನನ್ನು ಮುಂಬೈ ಪ್ರವಾಸದ ಒಳನೋಟ ತ್ವರಿತ ಕಾರ್ಯಾಚರಣೆಗೆ ಸಹಾಯವಾಯಿತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com