ಕೊಲಂಬೊ: ಭಾರತದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿದ್ದನೆನ್ನುವ ಕಾರಣಕ್ಕೆ ಶ್ರೀಲಂಕಾದ ಮಾಜಿ ಅಧ್ಯಕ್ಷರ ಪುತ್ರರನ್ನು ಶ್ರೀಲಂಕಾ ಪೋಲೀಸರು ಬಂಧಿಸಿದ್ದಾರೆ. ತಮ್ಮ ತಂದೆಯ ಹೆಸರಿನ ವಿಮಾನ ನಿಲ್ದಾನವನ್ನು ಬಾರತೀಯ ಸಂಸ್ಥೆಗೆ ಕಾನೂನುಬಾಹಿರವಾಗಿ ಮಾರಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ಹ್ಯಾಂಬಂಟೂಟ್ ನಲ್ಲಿ ಭಾರತೀಯ ದೂತಾವಾಸದ ಬಳಿ ಕಾನೂನುಬಾಹಿರ ವಾಗಿ ಪ್ರತಿಭಟನೆ ನಡೆಸುತ್ತಿದ್ದರೆನ್ನುವ ಕಾರಣಕ್ಕೆ ವಿಧಾನಸಭಾ ಸದಸ್ಯ, ಸಂಸದ ನಮಲ್ ರಾಜಪಕ್ಷೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಮಾಜಿ ನಾಯಕ ಮಹಿಂದಾ ರಾಜಪಕ್ಸಿಯ ಹಿರಿಯ ಪುತ್ರರಾದ ನಮಲ್ ಪ್ರತಿಬಟನೆ ನಡೆಸಿದ್ದಲ್ಲದೆ ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಗಾಗಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ರುವಾನ್ ಗುನಶೇಖರ ಹೇಳಿದ್ದಾರೆ.
"ಅವರು ಇಬ್ಬರು ಸಂಸತ್ ಸದಸ್ಯರು ಮತ್ತು ಇತರ ಮೂವರು ವ್ಯಕ್ತಿಗಳೊಡನೆ ಬಂಧಿತರಾದರು" ಗುಣಶೇಕರ್ ಹೇಳಿದರು. ಪ್ರತಿಭಟನೆಯ ಬಳಿಕ ಪೊಲೀಸರು 28 ಜನರನ್ನು ಬಂಧಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವೀಡಿಯೋ ಫೂಟೇಜ್ ನಲ್ಲಿ ಕೊಲಂಬೊಕ್ಕೆ ದಕ್ಷಿಣದ 240 ಕಿಲೋಮೀಟರ್ (150 ಮೈಲು) ದೂರದಲ್ಲಿರುವ ಹ್ಯಾಂಬಂಟೋಟ್ ನಲ್ಲಿ ಪ್ರತಿಭತನಾಕಾರರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಮತ್ತು ಭಾರತೀಯ ದೂತಾವಾಸದ ಬಳಿ ಮೆರವಣಿಗೆ ನಡೆಸಿದ್ದರು.