ಗ್ವಾದರ್ ಬಂದರು
ವಿದೇಶ
ಪಾಕಿಸ್ತಾನದ ಗ್ವಾದರ್ ಬಂದರಿನಲ್ಲಿ ಗ್ರೆನೇಡ್ ದಾಳಿ: 26 ಮಂದಿಗೆ ಗಾಯ
ಚೀನಾ ಆರ್ಥಿಕ ಸಹಕಾರದ ಭಾಗವಾಗಿರುವ ಪಾಕಿಸ್ತಾನದ ಗ್ವಾದರ್ ಬಂದರಿನಲ್ಲಿ ಗ್ರೆನೇಡ್ ದಾಳಿ ನಡೆದಿದ್ದು, 26 ಜನರು ಗಾಯಗೊಂಡಿದ್ದಾರೆ.
ಕ್ವೆಟ್ಟಾ: ಚೀನಾ ಆರ್ಥಿಕ ಸಹಕಾರದ ಭಾಗವಾಗಿರುವ ಪಾಕಿಸ್ತಾನದ ಗ್ವಾದರ್ ಬಂದರಿನಲ್ಲಿ ಗ್ರೆನೇಡ್ ದಾಳಿ ನಡೆದಿದ್ದು, 26 ಜನರು ಗಾಯಗೊಂಡಿದ್ದಾರೆ.
ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದ್ದು, ಪಾಕಿಸ್ತಾನದ ಭಾಗದಲ್ಲಿರುವ ಚೀನಾದ ಬೆಲ್ಟ್ ಆಂಡ್ ರೋಡ್ ಯೋಜನೆಗೆ ಮತ್ತೊಂದು ಆತಂಕ ಎದುರಾಗಿದೆ. ದ್ವಿಚಕ್ರವಾಹನದಲ್ಲಿ ಬಂದ ಅನಾಮಿಕ ದುಷ್ಕರ್ಮಿಗಳು ಊಟ ಮಾಡುತ್ತಿದ್ದ ಕಾರ್ಮಿಕರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನೈಸರ್ಗಿಕ ಸಂಪನ್ಮೂಲಗಳಿರುವ ಪಾಕಿಸ್ತಾನದ ಬಲೂಚಿಸ್ಥಾನದಿಂದ ಪಶ್ಚಿಮ ಚೀನಾ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳು ಹಾಗೂ ಯುರೋಪ್ ಗೆ ಸಂಪರ್ಕ ಕಲ್ಪಿಸುವುದು ಗ್ವಾದರ್ ಬಂದರಿನ ಉದ್ದೇಶವಾಗಿದೆ.
ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಗ್ರೆನೇಡ್ ದಾಳಿ ನಡೆಸಿರುವುದಕ್ಕೆ ಈ ವರೆಗೂ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲ. ಭದ್ರತಾ ಅಧಿಕಾರಿಗಳ ಪ್ರಕಾರ ಚೀನಾ-ಪಾಕಿಸ್ತಾನ ಎಕೆನಾಮಿಕ್ ಕಾರಿಡಾರ್ ನ್ನು ಭಯೋತ್ಪಾದಕರು ವಿರೋಧಿಸುತ್ತಿದ್ದು 2014 ರಿಂದ ಈ ವರೆಗೆ 50 ಪಾಕಿಸ್ತಾನಿ ಕಾರ್ಮಿಕರನ್ನು ಹತ್ಯೆ ಮಾಡಿದ್ದಾರೆ. ಅವರೇ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ