ಅಮೆರಿಕ: ಕಣ್ಮರೆಯಾಗಿದ್ದ ಭಾರತೀಯ ಮೂಲದ ಬಾಲಕಿ ಶವ ಪತ್ತೆ?

ಅಮೆರಿಕದಲ್ಲಿ ಎರಡು ವಾರಗಳ ಹಿಂದೆ ಕಾಣೆಯಾಗಿದ್ದ ಮೂರು ವರ್ಷದ ಭಾರತೀಯ ಮೂಲದ ಬಾಲಕಿ ಶವವಾಗಿದ್ದಾಳೆ.
ಶೆರಿನ್‌ ಮ್ಯಾಥ್ಯೂಸ್ ವೆಸ್ಲೆ ಮ್ಯಾಥ್ಯೂಸ್‌
ಶೆರಿನ್‌ ಮ್ಯಾಥ್ಯೂಸ್ ವೆಸ್ಲೆ ಮ್ಯಾಥ್ಯೂಸ್‌
ಹ್ಯೂಸ್ಟನ್: ಅಮೆರಿಕದಲ್ಲಿ ಎರಡು ವಾರಗಳ ಹಿಂದೆ ಕಾಣೆಯಾಗಿದ್ದ ಮೂರು ವರ್ಷದ ಭಾರತೀಯ ಮೂಲದ ಬಾಲಕಿ ಶವವಾಗಿದ್ದಾಳೆ. ಅಮೆರಿಕ ಪೋಲೀಸರು ಬಾಲಕಿಯ ಮೃತದೇಹವನ್ನು ಪತ್ತೆ ಮಾಡಿದ್ದು ಇದು 'ಕಾಣೆಯಾದ ಬಾಲಕಿಯ ದೇಹದಂತೆಯೇ ಇದೆ' ಎಂದು ಹೇಳಿದ್ದಾರೆ.
ಬೆಳವಣಿಗೆಯ ಸಮಸ್ಯೆಗಳು ಮತ್ತು ಸೀಮಿತ ಸಂವಹನ ಕೌಶಲ್ಯಗಳನ್ನು ಹೊಂದಿದ್ದ ಶೆರಿನ್‌ ಮ್ಯಾಥ್ಯೂಸ್, ಕಳೆದ ಅ. 7 ರಂದು ಟೆಕ್ಸಾಸ್ ನ ರಿಚರ್ಡ್ ಸನ್ ಸಿಟಿಯಲ್ಲಿ ತನ್ನ ಮನೆಯ ಹಿಂಭಾಗದಲ್ಲಿ ಕಡೆಯ ಬಾರಿಗೆ ಕಾಣಿಸಿದ್ದಳು.
ಶೆರಿನ್‌ ಪೋಷಕರಾದ ವೆಸ್ಲೆ ಮ್ಯಾಥ್ಯೂಸ್‌ ಅ. 7ರಂದು ಆಕೆ ಹಾಲು ಕುಡಿಯಲಿಲ್ಲ ಎನ್ನುವ ಕಾರಣಕ್ಕೆ ಮನೆಯಿಂದ ಹೊರಗೆ ನಿಲ್ಲುವ ಶಿಕ್ಷೆ ನೀಡಿದ್ದರು. ಹಾಗೆ ಶಿಕ್ಷೆಗೆ ಒಳಗಾಗಿದ್ದ ಬಾಲಕಿ ಕೆಲವು ಸಮಯದ ಬಳಿಕ ಕಾಣೆಯಾಗಿದ್ದಳು.
"ಮೂರು ವರ್ಷದ ಬಾಲಕಿಯ ಶವ ಡಲ್ಲಾಸ್‌ ಎಕ್ಸ್‌ಪ್ರೆಸ್‌ ವೇ ನ ಸುರಂಗ ಮಾರ್ಗದಲ್ಲಿ ಪತ್ತೆಯಾಗಿದ್ದು ನಾಪತ್ತೆಯಾದ ಬಾಲಕಿಯ ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಈ ಶವ ಪತ್ತೆಯಾಗಿದೆ. ಶವದ ಗುರುತು ಸ್ಪಷ್ಟವಾಗಿಲ್ಲ. ಆದರೆ ಇದು ನಾಪತ್ತೆಯಾಗಿದ್ದ ಬಾಲಕಿಯ ಶವ ಇರಬಹುದು ಎಂಬ ಶಂಕೆ ಇದೆ" ಎಂದು  ಟೆಕ್ಸಾಸ್‌ ಪೊಲೀಸರು ತಿಳಿಸಿದ್ದಾರೆ..
ಮಗುವಿನ ಪೋಷಕರಾದ ವೆಸ್ಲೆ ಮ್ಯಾಥ್ಯೂಸ್‌ ಬಿಹಾರದ ನಳಂದಾದಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಿಂದ ಕಳೆದ ವರ್ಷ ಶೆರಿನ್‌ಳನ್ನು ದತ್ತು ಪಡೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com