ಭಯೋತ್ಪಾದನೆ ಮೇಲೆ ಪಾಕ್ ಬೂಟಾಟಿಕೆ ಪ್ರಾದೇಶಿಕ, ಜಾಗತಿಕ ಭದ್ರತೆಗೆ ಅಪಾಯ!

ಭಯೋತ್ಪಾದನೆ ವಿರುದ್ಧ ಹೋರಾಡಬೇಕೆಂದು ಹೇಳಿಕೊಳ್ಳುತ್ತಿರುವ ಪಾಕಿಸ್ತಾನ ಅದೇ ಭಯೋತ್ಪಾದಯನ್ನು ಪೋಷಿಸುತ್ತಿರುವುದು ಪ್ರಾದೇಶಿಕ ಮತ್ತು ಜಾಗತಿಕ...
ಭಯೋತ್ಪಾದನೆ
ಭಯೋತ್ಪಾದನೆ
Updated on: 
ಬ್ರಸೆಲ್ಸ್(ಬೆಲ್ಜಿಯಂ): ಭಯೋತ್ಪಾದನೆ ವಿರುದ್ಧ ಹೋರಾಡಬೇಕೆಂದು ಹೇಳಿಕೊಳ್ಳುತ್ತಿರುವ ಪಾಕಿಸ್ತಾನ ಅದೇ ಭಯೋತ್ಪಾದಯನ್ನು ಪೋಷಿಸುತ್ತಿರುವುದು ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಯುರೋಪಿಯನ್ ಸಂಸತ್ತಿನ ಇಬ್ಬರು ಸದಸ್ಯರು ಹೇಳಿದ್ದಾರೆ. 
ಪಾಕಿಸ್ತಾನವು ಭಯೋತ್ಪಾದಕ ಸಂಸ್ಥೆಗಳಿಗೆ ಸುರಕ್ಷಿತಧಾಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ದಶಕಗಳವರೆಗೆ ಭದ್ರತಾ ತಜ್ಞರು ತಿಳಿದಿರುತ್ತಾರೆ. ಈ ಹಿನ್ನೆಲೆಯಲ್ಲೇ ಪಾಕಿಸ್ತಾನವನ್ನು ಭಯೋತ್ಪಾದಕ ಗುಂಪುಗಳ ವಿಶ್ವದ ಅತಿ ಪ್ರಾಯೋಗಿಕ ಪ್ರಯೋಜಕ ಎಂದು ಬ್ರೂರಿಂಗ್ಸ್ ಇನ್ಸ್ಟಿಟ್ಯೂಷನ್ ಪಟ್ಟಿ ಮಾಡಿದೆ ಎಂದರು.
ಭಯೋತ್ಪಾದಕರನ್ನು ರಕ್ಷಿಸಲು ಪಾಕಿಸ್ತಾನಿ ಅಧಿಕಾರಿಗಳು ಒಲವು ತೋರುತ್ತಿರುವುದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಮಸ್ಯೆಯಾಗಿದೆ, ಭಯೋತ್ಪಾದನೆಯಿಂದ ಪಾಕಿಸ್ತಾನವು ಹಾನಿಗೊಳಗಾಗುತ್ತಿದೆ ಎಂದು ಯುರೋಪಿಯನ್ ಪಾರ್ಲಿಮೆಂಟ್ ನ ಯುರೋಪಿಯನ್ ಕನ್ಸರ್ವೇಟಿವ್ ಮತ್ತು ರಿಫಾರ್ಮಿಸ್ಟ್ಸ್ ಗ್ರೂಪ್ (ಇಸಿಆರ್) ನ ಬ್ಯೂರೋ ಸದಸ್ಯರಾಗಿದ್ದ ಜಸ್ಸಿ ಹಲ್ಲಾ ಮತ್ತು ಯುರೋಪಿಯನ್ ಪಾರ್ಲಿಮೆಂಟ್ ನ ಯುರೋಪ್ ಆಫ್ ನೇಷನ್ಸ್ ಮತ್ತು ಫ್ರೀಡಮ್ ಗ್ರೂಪ್ನ ಸಹ-ಚೇರ್ ನಿಕೊಲಾಸ್ ಬೇ ಹೇಳಿದ್ದಾರೆ. 
2016ಕ್ಕಿಂತ ಮೊದಲು ಭಯೋತ್ಪಾದನೆಯ ನೇರ ಪರಿಣಾಮವಾಗಿ ಪಾಕಿಸ್ತಾನದಲ್ಲಿ ವರ್ಷಕ್ಕೆ ಸುಮಾರು 3 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಅಮೆರಿಕ ನೀಡಿರುವ ವರದಿಯನ್ನು ಉಲ್ಲೇಖಿಸುತ್ತಾ ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರು ಈ ಹೇಳಿಕೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com