ಸಿಂಗಾಪುರ: ಸಿಂಗಾಪುರದ ಹಂಗಾಮಿ ಅಧ್ಯಕ್ಷರನ್ನಾಗಿ ಭಾರತೀಯ ಮೂಲದ ಖ್ಯಾತ ಸಿವಿಲ್ ಸರ್ವೆಂಟ್ ಜೆವೈ ಪಿಳ್ಳೈ ಅವರನ್ನು ನೇಮಿಸಲಾಗಿದೆ.
ಸಿಂಗಾಪುರದ ಅಧ್ಯಕ್ಷರಾಗಿ ಟೋನಿ ಟಾನ್ ಕೆಂಗ್ ಯಮ್ ಅವರು ತಮ್ಮ 6 ವರ್ಷಗಳ ಅಧಿಕಾರವಧಿಯನ್ನು ಪೂರ್ಣಗೊಳಿಸಿದ್ದು ಈ ಹಿನ್ನೆಲೆಯಲ್ಲಿ 83 ವರ್ಷದ ಪಿಳ್ಳೈ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಚುನಾವಣೆ ನಡೆದು ನೂತನ ಅಧ್ಯಕ್ಷರು ಆಯ್ಕೆಯಾಗುವವರೆಗೂ ಜೆವೈ ಪಿಳ್ಳೈ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.