ಕೇಟ್ ಮಿಡ್ಲ್​ಟನ್ ಟಾಪ್ ಲೆಸ್ ಚಿತ್ರ ಪ್ರಕಟಿಸಿದ್ದ ಪತ್ರಿಕೆಗೆ 100,000 ಯೂರೋ ದಂಡ ವಿಧಿಸಿದ ಫ್ರಾನ್ಸ್ ಕೋರ್ಟ್

ಬ್ರಿಟನ್​ರಾಣಿ ಕೇಟ್​ಮಿಡ್ಲ್​ಟನ್​ಅವರ ಟಾಪ್ ಲೆಸ್ ಚಿತ್ರ ಪ್ರಕಟಿಸಿದ ಫ್ರೆಂಚ್ ಸೆಲೆಬ್ರಿಟಿ ಮ್ಯಾಗಜೀನ್ ಗೆ ಫ್ರಾನ್ಸ್ ಕೋರ್ಟ್ ಬರೋಬ್ಬರಿ...
ಕೇಟ್ ಮಿಡ್ಲ್​ಟನ್ - ಪ್ರಿನ್ಸ್ ವಿಲಿಯಮ್
ಕೇಟ್ ಮಿಡ್ಲ್​ಟನ್ - ಪ್ರಿನ್ಸ್ ವಿಲಿಯಮ್
ಪ್ಯಾರಿಸ್: ಬ್ರಿಟನ್​ರಾಣಿ ಕೇಟ್​ಮಿಡ್ಲ್​ಟನ್​ಅವರ ಟಾಪ್ ಲೆಸ್ ಚಿತ್ರ ಪ್ರಕಟಿಸಿದ ಫ್ರೆಂಚ್ ಸೆಲೆಬ್ರಿಟಿ ಮ್ಯಾಗಜೀನ್ ಗೆ ಫ್ರಾನ್ಸ್ ಕೋರ್ಟ್ 100,000 ಯೂರೋ ದಂಡ ವಿಧಿಸಿದೆ. ಅಲ್ಲದೆ ಕ್ಲೋಸರ್ ಮ್ಯಾಗಜೀನ್ ಸಂಪಾದಕರಿಗೆ ಮತ್ತು ಮಾಲೀಕರಿಗೆ ತಲಾ 45 ಸಾವಿರ ಯೂರೋ ದಂಡ ವಿಧಿಸಿದೆ.
2012ರ ಸೆಪ್ಟಂಬರ್​ನಲ್ಲಿ ಬ್ರಿಟನ್ ರಾಜದಂಪತಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್ ದಕ್ಷಿಣ ಫ್ರಾನ್ಸ್​ಪ್ರವಾಸದಲ್ಲಿದ್ದ ವೇಳೆ ರಾಣಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಮೇಲ್ಭಾಗದ ಉಡುಪಿಲ್ಲದ ಚಿತ್ರವನ್ನು ಕದ್ದು ತೆಗಿದಿದ್ದ ಫೋಟೋಗ್ರಾಫರ್ ಒಬ್ಬ ಅದನ್ನು ಕೆಲ ಪತ್ರಿಕೆಗಳಿಗೆ ಮಾರಿದ್ದ. ಕೇಟ್ ಅವರ ಚಿತ್ರವನ್ನು ಪ್ರಕಟಿಸಿ ಮಾಧ್ಯಮಗಳು ವಿಶ್ವಾದ್ಯಂತ ಭಾರಿ ಸದ್ದು ಉಂಟು ಮಾಡಿದ್ದವು.
ಇದರಲ್ಲಿ ಫ್ರೆಂಚ್​ನ ಗಾಸಿಪ್​ ಮಾಗ್ಝೈನ್​ ಕ್ಲೋಸರ್, ಪ್ರಾದೇಶಿಕ ಪತ್ರಿಕೆ ಲಾ ಪ್ರೊವೆನ್ಸ್​ ಪತ್ರಿಕೆಗಳು ಮೊದಲು ಈ ಚಿತ್ರವನ್ನು ಪ್ರಕಟಿಸಿದ್ದವು.
ಕೇಟ್ ಮಿಡ್ಲ್​ಟನ್​ಅವರ ಟಾಪ್ ಲೆಸ್ ಚಿತ್ರವನ್ನು ಪ್ರಕಟಿಸಿದ ಪತ್ರಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಬ್ರಿಟನ್​ರಾಯಲ್​ದಂಪತಿ, ಪತ್ರಿಕೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಭಾರಿ ಮೊತ್ತದ ದಂಡಕ್ಕಾಗಿ ಬೇಡಿಕೆ ಇಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com