ಭಯೋತ್ಪಾದಕರಿಗೆ ಆರ್ಥಿಕ ನೆರವು: ಹಬೀಬ್ ಬ್ಯಾಂಕ್ ಗೆ ಬೀಗ ಜಡಿದ ಅಮೆರಿಕ

ಭಯೋತ್ಪಾದಕರಿಗೆ ಆರ್ಥಿಕ ನೆರವು ಹೋಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದರೂ, ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅಮೆರಿಕ ಬ್ಯಾಂಕಿಂಗ್ ನಿಯಂತ್ರಣ ಸಂಸ್ಥೆ ಪಾಕಿಸ್ತಾನ...
ಹಬೀಬ್ ಬ್ಯಾಂಕ್
ಹಬೀಬ್ ಬ್ಯಾಂಕ್
ನ್ಯೂಯಾರ್ಕ್: ಭಯೋತ್ಪಾದಕರಿಗೆ ಆರ್ಥಿಕ ನೆರವು ಹೋಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದರೂ, ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅಮೆರಿಕ ಬ್ಯಾಂಕಿಂಗ್ ನಿಯಂತ್ರಣ ಸಂಸ್ಥೆ ಪಾಕಿಸ್ತಾನ ಮೂಲದ ಹಬೀಬ್ ಬ್ಯಾಂಕ್ ಗೆ ಬೀಗ ಜಡಿದಿದೆ. 
ಹಬೀಬ್ ಬ್ಯಾಂಕ್ ಪಾಕಿಸ್ತಾನದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿದ್ದು, ಭಯೋತ್ಪಾದಕರಿಗೆ ಆರ್ಥಿಕ ನೆರವು ದೊರೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿತ್ತು, ಆದರೆ ಈ ಆತಂಕದ ಬಗ್ಗೆ ಗಂಭೀರವಾಗಿ ಗಮನ ಹರಿಸದ ಹಿನ್ನೆಲೆಯಲ್ಲಿ ಅಮೆರಿಕದ ಬ್ಯಾಂಕಿಂಗ್ ನಿಯಂತ್ರಣ ಸಂಸ್ಥೆ ಬ್ಯಾಂಕ್ ಗೆ ಬೀಗ ಜಡಿದಿದ್ದು, 225 ಮಿಲಿಯನ್ ಡಾಲರ್ ದಂಡ ವಿಧಿಸಿದೆ. 
ಹಬೀಬ್ ಬ್ಯಾಂಕ್ ಅಮೆರಿಕಾದಲ್ಲಿ 1978 ರಿಂದ ಕಾರ್ಯನಿರ್ವಹಿಸುತ್ತಿದ್ದು, ಉಗ್ರರಿಗೆ ಹಣಕಾಸಿನ ಸಹಾಯ ದೊರೆಯದಂತೆ ಮಾಡಲು 2006 ರಲ್ಲಿ ಸೂಚನೆ ನೀಡಲಾಗಿತ್ತು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಬ್ಯಾಂಕ್ ನ್ನು ಮುಚ್ಚಲು ಆದೇಶ ನೀಡಲಾಗಿದ್ದು, ದಂಡ ವಿಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com