'ಜನಾಂಗೀಯ ಶುದ್ಧೀಕರಣ'ಕ್ಕೆ ರೋಹಿಂಗ್ಯಾ ಒಳ್ಳೆಯ ಉದಾಹರಣೆ: ವಿಶ್ವಸಂಸ್ಥೆ ಮಾನವ ಹಕ್ಕು ಮುಖ್ಯಸ್ಥ

ಮಾಯನ್ಮಾರ್ ನ ರಾಕೀನ್ ರಾಜ್ಯದಲ್ಲಿ ರೋಹಿಂಗ್ಯಾ ಮುಸ್ಲಿಂರ ಮೇಲೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಕ್ರೂರ ಭದ್ರತಾ ಕಾರ್ಯಾಚರಣೆಯನ್ನು...
ಪ್ರತಿಭಟನೆ ಚಿತ್ರ
ಪ್ರತಿಭಟನೆ ಚಿತ್ರ
ಜಿನಿವಾ: ಮಾಯನ್ಮಾರ್ ನ ರಖೈನ್ ರಾಜ್ಯದಲ್ಲಿ ರೋಹಿಂಗ್ಯಾ ಮುಸ್ಲಿಂರ ಮೇಲೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಕ್ರೂರ ಭದ್ರತಾ ಕಾರ್ಯಾಚರಣೆಯನ್ನು ವಿರೋಧಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಈ ಪ್ರಕರಣ ಜನಾಂಗೀಯ ಶುದ್ಧೀಕರಣಕ್ಕೆ ಒಳ್ಳೆಯ ಉದಾಹರಣೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಮಾನವ ಹಕ್ಕು ಮುಖ್ಯಸ್ಥ ಜೈದ್ ರಾವುದ್ ಅಲ್–ಹುಸೇನ್, ಮಾಯನ್ಮಾರ್ ನಲ್ಲಿನ ಹಿಂಸಾಚಾರದಿಂದಾಗಿ 2,70,000 ರೋಹಿಂಗ್ಯಾ ಮುಸ್ಲಿಂರು ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ. ಇನ್ನು ಸಾವಿರಾರು ಮಂದಿ ಗಡಿಯಲ್ಲಿ ಸಿಲುಕಿದ್ದಾರೆ. ದಶಕಗಳವರೆಗೆ ಪೌರತ್ವ ಹಕ್ಕುಗಳು ಸೇರಿದಂತೆ ರೋಹಿಂಗ್ಯಾ ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ತೆಗೆದುಹಾಕಲಾಗಿದೆ ಎಂದರು. 
ರಖೈನ್ ನಲ್ಲಿ ನಡೆಯುತ್ತಿರುವ ಕ್ರೂರ ಸೇನಾ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ. ಇನ್ನು ಅಲ್ಲಿ ಸಂಭವಿಸಿದ ಎಲ್ಲಾ ಉಲ್ಲಂಘನೆಗಳಿಗೆ ಜವಾಬ್ದಾರಿಯುತವಾಗಿದೆ ವರ್ತಿಸಿ ಮತ್ತು ರೋಹಿಂಗ್ಯ ಮುಸ್ಲಿಂ ಜನಾಂಗದ ವಿರುದ್ಧ ತೀವ್ರ ಮತ್ತು ವ್ಯಾಪಕವಾದ ತಾರತಮ್ಯದ ಮಾದರಿಯನ್ನು ತೊಡೆದು ಹಾಕಲು ಸೂಚಿಸಿದ್ದೇನೆ ಎಂದರು. 
ರಖೈನ್ ನಲ್ಲಿ ಆಗಸ್ಟ್ 25ರಂದು ದಾಳಿ ನಡೆಸಿ ರಕ್ತಪಾತಕ್ಕೆ ಕಾರಣವಾಗಿದ್ದ ರೋಹಿಂಗ್ಯ ಉಗ್ರರ ವಿರುದ್ಧ ಸೇನಾಪಡೆ ಬಿರುಸಿನ ಕಾರ್ಯಾಚರಣೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ರಖೈನ್ ನಲ್ಲಿ ಭೀಕರ ಹಿಂಸಾಚಾರ ಭುಗಿಲೇಳಲು ಮೂಲಕ ಕಾರಣವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com