ಬ್ರೆಕ್ಸಿಟ್ ನಿರ್ಣಯ: ಬ್ರಿಟನ್ ಸಂಸತ್ತಿನಲ್ಲಿ ಮೊದಲ ಸುತ್ತಿನ ಮತದಾನ ಯಶಸ್ವಿ

ಬ್ರಿಟನ್, ಯುರೋಪಿಯನ್ ಯೂನಿಯನ್ ನಿಂದ ಹೊರಬರುವ ಮಹತ್ವದ ಬ್ರೆಕ್ಸಿಟ್ ಕಾಯ್ದೆ ಬೆಂಬಲಿಸಿ ಬ್ರಿಟಿಷ್ ಸಂಸದರು ಇಂದು ಮತ ಚಲಾಯಿಸಿದ್ದಾರೆ. ಇದು ಬ್ರೆಕ್ಸಿಟ್ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಬ್ರೆಕ್ಸಿಟ್ ನಿರ್ಣಯ: ಬ್ರಿಟನ್ ಸಂಸತ್ತಿನಲ್ಲಿ ಮೊದಲ ಸುತ್ತಿನ ಮತದಾನ ಯಶಸ್ವಿ
ಬ್ರೆಕ್ಸಿಟ್ ನಿರ್ಣಯ: ಬ್ರಿಟನ್ ಸಂಸತ್ತಿನಲ್ಲಿ ಮೊದಲ ಸುತ್ತಿನ ಮತದಾನ ಯಶಸ್ವಿ
ಲಂಡನ್: ಬ್ರಿಟನ್, ಯುರೋಪಿಯನ್ ಯೂನಿಯನ್ ನಿಂದ ಹೊರಬರುವ, ಮಹತ್ವದ ಬ್ರೆಕ್ಸಿಟ್ ಕಾಯ್ದೆ ಬೆಂಬಲಿಸಿ ಬ್ರಿಟಿಷ್ ಸಂಸದರು ಮತ ಚಲಾಯಿಸಿದ್ದಾರೆ. ಇದು ಬ್ರೆಕ್ಸಿಟ್ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ ಎಂದು ವಿಶ್ಲೇಷಿಸಲಾಗಿದೆ.
13 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಒಟ್ಟು 326 ರಲ್ಲಿ 290 ಸಂಸದರು ಕಾಯ್ದೆ ಪರವಾಗಿ ಮತ ಚಲಾಯಿಸಿದರು. ಈಗ ಈ ಕಾಯ್ದೆ ಅನುಷ್ಟಾನಕ್ಕಾಗಿ ಮತ್ತೆ ಮುಂದಿನ ಕ್ರಮ ತೆಗೆದುಕೊಳ್ಳಲು ಅನುಕೂಲವಾಗಲಿದೆ.
1972 ರ ಕಾನೂನನ್ನು ರದ್ದುಗೊಳಿಸುವುದರ ಮೂಲಕಈ ಕಾಯ್ದೆ ಜಾರಿ ಮಾಡಲು ಮುಂದಾಗಿದ್ದು, ಈ ಮೂಲಕ ಬ್ರಿಟನ್  12,000 ಕ್ಕೂ ಹೆಚ್ಚು ಯುರೋಪಿಯನ್ ಯೂನಿಯನ್ ನಿಯಮಾವಳಿಗಳನ್ನು ಬ್ರಿಟನ್ ಶಾಸನ ಪುಸ್ತಕದಿಂದ ತೆಗೆದುಹಾಕಲಾಯಿತು.
ಮಾರ್ಚ್ ನಲ್ಲಿ ಪ್ರಧಾನಿ ಥೆರೆಸಾ ಮೇ ಬ್ರೆಕ್ಸಿಟ್ ಘೋಷಣೆಯನ್ನು ಔಪಚಾರಿಕವಾಗಿ ಪ್ರಕಟಿಸಿದ ನಂತರದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಕಳೆದ ವರ್ಷ ಬ್ರೆಕ್ಸಿಟ್ ಕುರಿತಂತೆ ಬ್ರಿಟನ್ ನಲ್ಲಿ ಐತಿಹಾಸಿಕ ಜನಾಭಿಪ್ರಾಯ ಮತವನ್ನು ಸಂಗ್ರಹಿಸಲಾಗಿತ್ತು. ಇದನ್ನು ಜಾರಿ ಮಾಡುವಲ್ಲಿ ಈಗಿನ ಮತದಾನ ಮಹತ್ವದ ಹಂತವಾಗಿದೆ.
ಮೇ ಅವರ ಕನ್ಸರ್ವೇಟಿವ್ ಸರ್ಕಾರ ಇಂದಿನ ಸಂಸತ್ತಿನ ಮತದಾನದಲ್ಲಿ ಉತ್ತರ ಐರ್ಲೆಂಡ್ ನ ಡೆಮೋಕ್ರಾಟಿಕ್ ಯೂನಿಯನಿಸ್ಟ್ ಪಾರ್ಟಿಯೊಂದಿಗಿನ ಮೈತ್ರಿ ಯಿಂದಾಗಿ ಗೆದ್ದುಕೊಂಡಿತು.
"ಐರೋಪ್ಯ ಒಕ್ಕೂಟದಿಂದ ನಮ್ಮ ವಾಪಸಾತಿಗೆ ಮುಂಚಿತವಾಗಿ ನಡೆದಿರುವ ಈ ಮತದಾನ ನಿಶ್ಚಿತತೆ ಮತ್ತು ಸ್ಪಷ್ಟತೆ ನೀಡುತ್ತದೆ. ಇದು ಒಂದು "ಐತಿಹಾಸಿಕ ನಿರ್ಣಯ" ಎಂದು ಯ ಫಲಿತಾಂಶವನ್ನು ಪ್ರಧಾನಿ ಥೆರೇಸಾ ಮೇ ವರ್ಣಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com