ಮ್ಯಾನ್ ಬೂಕರ್ ಸ್ಪರ್ಧೆಯಿಂದ ಹೊರಬಿದ್ದ ಅರುಂಧತಿ ರಾಯ್

ಭಾರತೀಯ ಲೇಖಕಿ ಅರುಂಧತಿ ರಾಯ್ ಅವರು ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಸ್ಪರ್ಧೆಯ ಅಂತಿಮ ಸುತ್ತಿನಿಂದ ಹೊರ ಬಿದ್ದಿದ್ದು,...
ಅರುಂಧತಿ ರಾಯ್
ಅರುಂಧತಿ ರಾಯ್
ಲಂಡನ್: ಭಾರತೀಯ ಲೇಖಕಿ ಅರುಂಧತಿ ರಾಯ್ ಅವರು ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಸ್ಪರ್ಧೆಯ ಅಂತಿಮ ಸುತ್ತಿನಿಂದ ಹೊರ ಬಿದ್ದಿದ್ದು, 2017ನೇ ಸಾಲಿನ ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕದ ಲೇಖಕರೇ ಮುಂಚೂಣಿಯಲ್ಲಿದ್ದಾರೆ.
ಅರುಂಧತಿ ರಾಯ್ ಅವರು 1997ರಲ್ಲಿ ತಮ್ಮ ಮೊದಲ ಕಾದಂಬರಿ ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಗೆ ಬೂಕರ್ ಪ್ರಶಸ್ತಿ ಗಳಿಸಿದ್ದರು. ಎರಡನೇ ಬಾರಿ ಮ್ಯಾನ್ ಬೂಕರ್ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಗಿದ್ದಾರೆ. 20 ವರ್ಷಗಳ ಹಿಂದೆ ಭಾವನಾತ್ಮಕ,ಕಾಲ್ಪನಿಕ ಕಥಾನಕ ವಿಭಾಗದಲ್ಲಿ ಅರುಂಧತಿಗೆ ಬುಕರ್‌ ಪ್ರಶಸ್ತಿ ಲಭಿಸಿತ್ತು. ಈಗ ಅವರ ದಿ ಮಿನಿಸ್ಟ್ರಿ ಆಫ್ ಅಟ್ ಮೋಸ್ಟ್ ಹ್ಯಾಪಿನೆಸ್ ಕೃತಿ ಮ್ಯಾನ್ ಬೂಕರ್ ಅವಾರ್ಡ್ ಪಟ್ಟಿಯಲ್ಲಿ ಸ್ಥಾನಪಡೆದಿತ್ತು. ಆದರೆ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಗಿದೆ.
ಇಂದು ಅಂತಿಮ 7 ಪುಸ್ತಕಗಳ ಪಟ್ಟಿ ಪ್ರಕಟಗೊಂಡಿದ್ದು, 2017ನೇ ಸಾಲಿನ ವಿಜೇತರ ಹೆಸರು ಅ.17ರಂದು ಘೋಷಣೆಯಾಗಲಿದೆ. 
1961ರಲ್ಲಿ ಜನಿಸಿದ ಅರುಂಧತಿ ರಾಯ್‌ ಅವರು ಹಲವು ಲೇಖನ, ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com