ಶ್ವೇತ ಭವನದ ಪ್ರಮುಖ ಹುದ್ದೆಗೆ ಭಾರತೀಯ ಅಮೆರಿಕನ್ ಪ್ರಜೆಯನ್ನು ನೇಮಿಸಿದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಮತ್ತೋರ್ವ ಭಾರತೀಯ ಅಮೆರಿಕನ್ ಪ್ರಜೆ ಆಯಕಟ್ಟಿನ ಹುದ್ದೆಗೆ ನೇಮಕಗೊಂಡಿದ್ದಾರೆ.
ರಾಜ್ ಷಾ
ರಾಜ್ ಷಾ
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಮತ್ತೋರ್ವ ಭಾರತೀಯ ಅಮೆರಿಕನ್ ಪ್ರಜೆ ಆಯಕಟ್ಟಿನ ಹುದ್ದೆಗೆ ನೇಮಕಗೊಂಡಿದ್ದಾರೆ. 

ಭಾರತೀಯ-ಅಮೆರಿಕನ್ ಆಗಿರುವ ರಾಜ್ ಷಾ ಅವರನ್ನು ಡೊನಾಲ್ಡ್ ಟ್ರಂಪ್ ಶ್ವೇತ ಭವನದ ಸಂವಹನ (ಕಮ್ಯುನಿಕೇಷನ್ಸ್) ತಂಡದ ಪ್ರಮುಖ ಹುದ್ದೆಗೆ ನೇಮಕ ಮಾಡಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ. ಟ್ರಂಪ್ ತಮ್ಮ ಆಪ್ತರಾಗಿರುವ ಹೋಪ್ ಹಿಕ್ಸ್ ಅವರನ್ನು ಕಮ್ಯುನಿಕೇಷನ್ಸ್ ನ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದು, ರಾಜ್ ಷಾ  ಅಧ್ಯಕ್ಷ ಮತ್ತು ಮಾಧ್ಯಮ ವಿಭಾಗದ ಪ್ರಧಾನ ಉಪಕಾರ್ಯದರ್ಶಿ ಹುದ್ದೆಗೆ ರಾಜ್ ಷಾ ನೇಮಕಗೊಂಡಿದ್ದಾರೆ. 

32 ವರ್ಷದ ಷಾ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಶ್ವೇತ ಭವನ ಪ್ರವೇಶಿಸಿದವರ ಆಪ್ತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು. ಷಾ ಅವರ ಪೋಷಕರು ಗುಜರಾತ್ ಮೂಲದವರಾಗಿದ್ದು 1980 ರಲ್ಲಿ ಅಮೆರಿಕಾಗೆ ವಲಸೆ ಹೋಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com