ಸಿಂಗಾಪುರ್: ಮತದಾನವಿಲ್ಲದೆ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷೆಯಾಗಿ ಹಲೀಮತ್ ಯಾಕೂಬ್ ಆಯ್ಕೆ

ಸಿಂಗಾಪುರ ನೂತನ ರಾಷ್ಟ್ರಾಧ್ಯಕ್ಷರಾಗಿ ಹಲೀಮತ್ ಯಾಕೂಬ್ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಸಿಂಗಾಪುರದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದಾರೆ.
ಹಲೀಮತ್ ಯಾಕೂಬ್ ಸಿಂಗಾಪುರದ ಎಂಟನೇ ಅಧ್ಯಕ್ಷೆ ಆಗಿ ಬುಧವಾರ ಅಧಿಕಾರ ವಹಿಸಿಕೊಂಡರು
ಹಲೀಮತ್ ಯಾಕೂಬ್ ಸಿಂಗಾಪುರದ ಎಂಟನೇ ಅಧ್ಯಕ್ಷೆ ಆಗಿ ಬುಧವಾರ ಅಧಿಕಾರ ವಹಿಸಿಕೊಂಡರು
ಸಿಂಗಾಪುರ್: ಸಿಂಗಾಪುರ ನೂತನ ರಾಷ್ಟ್ರಾಧ್ಯಕ್ಷರಾಗಿ ಹಲೀಮತ್ ಯಾಕೂಬ್ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಸಿಂಗಾಪುರದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದಾರೆ.
ಮುಸ್ಲಿಂ ಮಲಾಯ್ ಅಲ್ಪಸಂಖ್ಯಾತ ಸಮುದಾಯದಿಂದ ಬಂದ ಹಲೀಮತ್  ಸಿಂಗಾಪುರ ಸಂಸತ್ತಿನ ಮಾಜಿ ಸ್ಪೀಕರ್ ಸಹ ಆಗಿದ್ದರು, 
63 ವರ್ಷದ ಯಾಕೂಬ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮಲಾಯ್ ಸಮುದಾಯದ ಎರಡನೇ ವ್ಯಕ್ತಿಯೊಬ್ಬರು ಈ ಮಹತ್ತರ ಹುದ್ದೆಗೆ ಕಾಲಿಟ್ಟಂತಾಗಿದೆ. ಈ ಹಿಂದೆ, 1965 ಹಾಗೂ 1970ರಲ್ಲಿ ಮಲಾಯ್ ಸಮುದಾಯದ ಯೂಸುಫ್ ಇಶಾಕ್ ಅವರು ಸಿಂಗಾಪುರದ ಅಧ್ಯಕ್ಷರಾಗಿದ್ದರು. ಇವರು ರಾಷ್ಟ್ರಪತಿ ಹುದ್ದೆಗೆ ಏರಿದ ಹಿಂದುಳಿದ ಸಮುದಾಯದ ಮೊದಲ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದೇ ವೇಳೆ  ನೂತನ ಅಧ್ಯಕ್ಷರ ಆಯ್ಕೆಗೆ ಯಾವ ಮತದಾನವನ್ನೂ ನಡೆಸದ ಕಾರಣ ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂಡು ಎದುರಾಳಿಗಳು ಟೀಕಿಸಿದರು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆ ಬಗ್ಗೆ ಕೇಳಿಬಂದಂತಹುದೇ ಪ್ರತಿರೋಧಗಳು ಇವರ ಬಗ್ಗೆಯೂ ಕೇಳಿ ಬಂದಿದೆ.
ಆದರೆ ಯಾಕೂಬ್ "ನಾನು ಎಲ್ಲರ ಅಧ್ಯಕ್ಷೆಯಾಗಿದ್ದೇನೆ, ಯಾವುದೇ ಚುನಾವಣೆ ನಡೆಯದಿದ್ದರೂ, ನಿಮ್ಮ ಸೇವೆ ಮಾಡಲು ನಾನು ಬದ್ದಳಾಗಿದ್ದೇನೆ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com