ಆನ್ ಲೈನ್ ಗೆ ಸಂಬಂಧಿಸಿದ ಉದ್ಯಮದಿಂದ ಆದಾಯ ಗಳಿಸಲು ಬಗ್ಗೆ ಸೌದಿ ಅರೇಬಿಯಾ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಇಂಟರ್ ನೆಟ್ ಕರೆಗಳು ಅಗತ್ಯವಾಗಿರುವುದರಿಂದ ನಿಷೇಧ ಹಿಂಪಡೆಯಲು ಸಿದ್ಧತೆ ನಡೆಸಿದೆ. ಮೈಕ್ರೋಸಾಫ್ಟ್ ನ ಸ್ಕೈಪ್, ಫೇಸ್ ಬುಕ್ ನ ವಾಟ್ಸ್ ಆಪ್ ಮೂಲಕ ವಿಡಿಯೋ ಕರೆ ಮಾಡಬಹುದಾಗಿದ್ದು, ಶೀಘ್ರವೇ ನಿಷೇಧವನ್ನು ಹಿಂಪಡೆಯಲಾಗುವುದು ಎಂದು ತಿಳಿದುಬಂದಿದೆ.