ವಿಶ್ವದ ಶ್ರೀಮಂತ ಮಹಿಳೆ, ಲೋರಿಯಲ್ ಸೌಂದರ್ಯವರ್ಧಕದ ಒಡತಿ ಲಿಲಿಯನ್ ಬೆಟ್ಟನ್ಕೋರ್ಟ್ ನಿಧನ

ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಮತ್ತು ಲೋರಿಯಲ್ ಸೌಂದರ್ಯವರ್ಧಕ ಸಂಪತ್ತಿನ ಒಡತಿ ಲಿಲಿಯನ್...
ಲಿಲಿಯನ್ ಬೆಟ್ಟನ್ಕೋರ್ಟ್(ಸಂಗ್ರಹ ಚಿತ್ರ)
ಲಿಲಿಯನ್ ಬೆಟ್ಟನ್ಕೋರ್ಟ್(ಸಂಗ್ರಹ ಚಿತ್ರ)
ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಮತ್ತು ಲೋರಿಯಲ್ ಸೌಂದರ್ಯವರ್ಧಕ ಸಂಪತ್ತಿನ ಒಡತಿ ಲಿಲಿಯನ್ ಬೆಟ್ಟನ್ಕೋರ್ಟ್ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಈ ವಿಷಯವನ್ನು ಖಚಿತಪಡಿಸಿರುವ ಅವರ ಪುತ್ರಿ ಫ್ರಾಂಕೋಯಿಸ್ ಬೆಟ್ಟನ್ಕೋರ್ಟ್-ಮೇಯರ್ಸ್, ನಿನ್ನೆ ಮುಂಜಾನೆ ಪ್ಯಾರಿಸ್ ನ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ.
ಅವರು ಬದುಕಿರುತ್ತಿದ್ದರೆ ನಿನ್ನೆ 95ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗಿತ್ತು. ಹುಟ್ಟುಹಬ್ಬದ ದಿನವೇ ಮೃತಪಟ್ಟಿದ್ದಾರೆ. ಅವರು ತಮ್ಮ ಕೊನೆ ದಿನಗಳನ್ನು ಶಾಂತವಾಗಿ ಕಳೆದಿದ್ದಾರೆ ಎಂದು ಪುತ್ರಿ ಹೇಳಿರುವುದಾಗಿ ಇಂಗ್ಲೆಂಡಿನ ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.
2016ನೇ ಫೋರ್ಬ್ಸ್ ಪಟ್ಟಿಯಲ್ಲಿ ಲಿಲಿಯನ್ ಬೆಟೆನ್ಕೂಟ್ ಅವರನ್ನು ವರ್ಷದ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎಂದು ರ್ಯಾಂಕ್ ನೀಡಲಾಗಿತ್ತು. ಅವರ ಸಂಪತ್ತಿನ ಮೌಲ್ಯ 39.5 ಬಿಲಿಯನ್ ಡಾಲರ್. ಹೀಗಾಗಿ ವಿಶ್ವದಲ್ಲಿ 14ನೇ ಅತ್ಯಂತ ಶ್ರೀಮಂತ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಬೆಟ್ಟನ್ಕೋರ್ಟ್ ನಿಧನಕ್ಕೆ ಲೋರಿಯಲ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಜೀನ್-ಪಾಲ್ ಅಗೋನ್ ಸಂತಾಪ ಸೂಚಿಸಿದ್ದಾರೆ. ಲೋರಿಯಲ್ ಕಂಪೆನಿಯ ಹುಟ್ಟು, ಬೆಳವಣಿಗೆ, ಯಶಸ್ಸನ್ನು ಬೆಟ್ಟನ್ಕೋರ್ಟ್ ಬಹಳ ಹತ್ತಿರದಿಂದ ಕಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರಿಗೆ ಸಮಾಧಾನ ಹೇಳಲು ಬಯಸುತ್ತೇವೆ ಎಂದಿದ್ದಾರೆ.
ಲೋರಿಯಲ್ ಕಂಪೆನಿಯನ್ನು ಬೆಟ್ಟನ್ಕೋರ್ಟ್ ಅವರ ಪೋಷಕರಾದ ಲೂಯಿಸ್ ಮಡೆಲೈನ್ ಬರ್ತ್ ಮತ್ತು ಯುಜೀನ್ ಸ್ಕುಲರ್ ಸ್ಥಾಪಿಸಿದ್ದರು. ಪ್ಯಾರಿಸ್ ನಲ್ಲಿ ಜನಿಸಿದ ಬೆಟ್ಟನ್ಕೋರ್ಟ್ ಒಬ್ಬಳೇ ಪುತ್ರಿ.
ತಮ್ಮ ಅಂತಿಮ ದಿನಗಳಲ್ಲಿ ಕಂಪೆನಿಯ ಹಕ್ಕು, ಆಸ್ತಿಯ ಒಡೆತನಕ್ಕಾಗಿ ಕೋರ್ಟ್ ಗೆ ಅಲೆಯಬೇಕಾಗಿ ಬಂತು. ಬೆಟ್ಟನ್ಕೋರ್ಟ್ ಅಫೈರ್ ಎಂದೇ ಪ್ರಖ್ಯಾತವಾಗಿರುವ ಈ ವಿವಾದ 2011ರಲ್ಲಿ ಕೊನೆಗೊಂಡಿತ್ತು. ನಂತರ ಮಾನಸಿಕ ಅಸ್ವಸ್ಥರಾಗಿದ್ದ ಬೆಟ್ಟನ್ಕೋರ್ಟ್ ತಮ್ಮ ಕುಟುಂಬದವರ ರಕ್ಷಣೆಯಲ್ಲಿದ್ದರು.ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com