ಅಮೆರಿಕ ಸಚಿವ ರೆಕ್ಸ್ ಟಿಲರ್ಸನ್-ಸ್ವರಾಜ್ ಭೇಟಿ; ಭಯೋತ್ಪಾದನೆ, ಹೆಚ್1 ಬಿ ವೀಸಾ ಕುರಿತು ಚರ್ಚೆ

ಅಮೆರಿಕಾಗೆ ಭೇಟಿ ನೀಡಿರುವ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅಮೆರಿಕ ಸಚಿವ ರೆಕ್ಸ್ ಟಿಲರ್ಸನ್ ಅವರನ್ನು ಭೇಟಿ ಮಾಡಿದ್ದು, ಭಯೋತ್ಪಾದನೆ ಹಾಗೂ ಹೆಚ್1 ಬಿ ವೀಸಾ ಕುರಿತು ಚರ್ಚೆ ಮಾಡಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನ್ಯೂಯಾರ್ಕ್: ಅಮೆರಿಕಾಗೆ ಭೇಟಿ ನೀಡಿರುವ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅಮೆರಿಕ ಸಚಿವ ರೆಕ್ಸ್ ಟಿಲರ್ಸನ್ ಅವರನ್ನು ಭೇಟಿ ಮಾಡಿದ್ದು, ಭಯೋತ್ಪಾದನೆ ಹಾಗೂ ಹೆಚ್1 ಬಿ ವೀಸಾ ಕುರಿತು ಚರ್ಚೆ ಮಾಡಿದ್ದಾರೆ. 
ವಿಶ್ವಸಂಸ್ಥೆ ಮಾಹಾಸಭೆಯ ಪಾರ್ಶ್ವದಲ್ಲಿ ಇಬ್ಬರೂ ನಾಯಕರು ಭೇಟಿ ಮಾಡಿದ್ದು, ಅಮೆರಿಕ-ಭಾರತ ನಡುವಿನ ಆರ್ಥಿಕ ಸಹಕಾರದ ಬಲವರ್ಧನೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಅಫ್ಘಾನಿಸ್ತಾನದ ಅಭಿವೃದ್ಧಿ ಹಾಗೂ ಸ್ಥಿರತೆಗಾಗಿ ನೀಡಿರುವ ಸಹಕಾರಕ್ಕೆ ಅಮೆರಿಕ ಸಚಿವರು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. 
ದ್ವಿಪಕ್ಷೀಯ ಮಾತುಕತೆ ವೇಳೆ ಹೆಚ್ 1 ಬಿ ವೀಸಾ ಬಗ್ಗೆಯೂ ಸುಷ್ಮಾ ಸ್ವರಾಜ್ ಪ್ರಸ್ತಾಪಿಸಿದ್ದು, ಪಾಕಿಸ್ತಾನದ ಭಯೋತ್ಪಾದನೆಯ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com