ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಗೃಹಬಂಧನ ಅವಧಿ ಮತ್ತೆ ಒಂದು ತಿಂಗಳು ವಿಸ್ತರಣೆ

ಮುಂಬಯಿ ಭಯೋತ್ಪಾದನಾ ದಾಳಿಯ ರೂವಾರಿ ಹಫೀಜ್ ಸಯೀದ್ ನ ಗೃಹ ಬಂಧನವನ್ನು ಪಾಕಿಸ್ತಾನ ಮತ್ತೊಂದು ತಿಂಗಳು ವಿಸ್ತರಿಸಿದೆ.
ಹಫೀಜ್ ಸಯೀದ್
ಹಫೀಜ್ ಸಯೀದ್
ಲಾಹೋರ್: ಮುಂಬಯಿ ಭಯೋತ್ಪಾದನಾ ದಾಳಿಯ ರೂವಾರಿ ಹಫೀಜ್ ಸಯೀದ್ ನ ಗೃಹ ಬಂಧನವನ್ನು ಪಾಕಿಸ್ತಾನ ಮತ್ತೊಂದು ತಿಂಗಳು ವಿಸ್ತರಿಸಿದೆ. ಅವರ ಚಟುವಟಿಕೆಗಳು ದೇಶದಲ್ಲಿ ಶಾಂತಿ ಕದಡುವಿಕೆಗೆ ರಹದಾರಿ ಆಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತದ ಅಧಿಕಾರಿಗಳು ತಿಳಿಸಿದ್ದಾರೆ.
ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಸಯೀದ್ ಅವರು ಈ ವರ್ಷದ ಜನವರಿ 31 ರಿಂದ ಗೃಹಬಂಧನದಲ್ಲಿದ್ದಾನೆ.
ಸಯೀದ್ ಮತ್ತು ಅವರ ನಾಲ್ವರು ಸಹಾಯಕರಾದ ಅಬ್ದುಲ್ಲಾ ಉಬೈದ್, ಮಲಿಕ್ ಜಾಫರ್ ಇಕ್ಬಾಲ್, ಅಬ್ದುಲ್ ರೆಹಮಾನ್ ಅಬಿದ್ ಮತ್ತು ಖಝಿ ಕಾಶಿಫ್ ಹುಸೇನ್ ಅವರ ಗೃಹ ಬಂಧನವನ್ನು ಸೆಪ್ಟಂಬರ್ 25 ರಿಂದ ಜಾರಿಗೆ ಬರುವಂತೆ ಮತ್ತೆ 30 ದಿನಗಳಿಗೆ ವಿಸ್ತರಿಸಿ ಪಂಜಾಬ್ ಗೃಹ ಇಲಾಖೆ ನಿನ್ನೆ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ ಜುಲೈ 28 ರಂದು ಜೆಯುಡಿ ಮುಖ್ಯಸ್ಥನ ಬಂಧನ ವಿಸ್ತರಿಸಿ ಆದೇಶ ನೀಡಲಾಗಿತ್ತು.
ಈವರ್ಷ  ಜ. 31ರಂದು, ಸಯೀದ್ ಮತ್ತು ಇತರ ನಾಲ್ವರನ್ನು ಭಯೋತ್ಪಾದನಾ ವಿರೋಧಿ ಕಾಯ್ದೆ 1997 ರ ಅಡಿಯಲ್ಲಿ 90 ದಿನಗಳ ಕಾಲ ಗೃಹಬಂಧನದಲ್ಲಿ ಇರಿಸಿ ಪಂಜಾಬ್ ಸರ್ಕಾರ ಆದೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com