ರೋಹಿಂಗ್ಯಾ ಬಿಕ್ಕಟ್ಟು: ಆಕ್ಸ್ಫರ್ಡ್ ವಿವಿಯಲ್ಲಿದ್ದ ಆಂಗ್‌ ಸಾನ್ ಸೂಕಿ ಭಾವಚಿತ್ರ ತೆರವು

ಬರ್ಮಾದಲ್ಲಿ ರೋಹಿಂಗ್ಯಾ ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆಯೇ ಮಯನ್ಮಾರ್ ನ ನಾಯಕಿ ಆಂಗ್ ಸಾನ್ ಸೂಕಿ ವಿರುದ್ಧ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಇಂಗ್ಲೆಂಡಿನ ಆಕ್ಸ್‌ಫರ್ಡ್‌ ಕಾಲೇಜಿನಲ್ಲಿ ಇಡಲಾಗಿದ್ದ ಆಂಗ್ ಸಾನ್ ಸೂಕಿ...
ಆಂಗ್‌ ಸಾನ್ ಸೂಕಿ
ಆಂಗ್‌ ಸಾನ್ ಸೂಕಿ
ಲಂಡನ್: ಬರ್ಮಾದಲ್ಲಿ ರೋಹಿಂಗ್ಯಾ ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆಯೇ ಮಯನ್ಮಾರ್ ನ ನಾಯಕಿ ಆಂಗ್ ಸಾನ್ ಸೂಕಿ ವಿರುದ್ಧ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಇಂಗ್ಲೆಂಡಿನ ಆಕ್ಸ್‌ಫರ್ಡ್‌ ಕಾಲೇಜಿನಲ್ಲಿ ಇಡಲಾಗಿದ್ದ ಆಂಗ್ ಸಾನ್ ಸೂಕಿ ಅವರ ಭಾವ ಚಿತ್ರವನ್ನು ತೆರವುಗೊಳಿಸಲಾಗಿದೆ. 
1967 ರಲ್ಲಿ ಆಂಗ್ ಸಾನ್ ಸೂಕಿ ಆಕ್ಸ್‌ಫರ್ಡ್‌ನಲ್ಲೇ ಪದವಿ ಶಿಕ್ಷಣ ಪಡೆದಿದ್ದರು. 2012ರಲ್ಲಿ ವಿವಿಯಿಂದ ಗೌರವ ಡಾಕ್ಟರೇಟ್ ಸಹ ಪಡೆದಿದ್ದರು. ಆದರೆ ಈಗ ಮಯನ್ಮಾರ್ ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಲಸೆ ಹಾಗೂ ಅಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಆಂಗ್ ಸಾನ್ ಸೂಕಿ ಆಡಳಿತ ವಿಫಲವಾಗಿದೆ ಎಂಬ ಟೀಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇಂಗ್ಲೆಂಡಿನ ಆಕ್ಸ್‌ಫರ್ಡ್‌ ಕಾಲೇಜಿನ ಮುಖ್ಯದ್ವಾರದಲ್ಲಿ ಹಾಕಲಾಗಿದ್ದ ಆಂಗ್ ಸಾನ್ ಸೂಕಿ ಅವರ ಭಾವ ಚಿತ್ರವನ್ನು ತೆರವುಗೊಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com