ಲಂಡನ್ ಗೆ ಮತ್ತೆ ಹಿಂದಿರುಗಿದ ಮಲಾಲಾ

ಪಾಕಿಸ್ತಾನದ ಮೊದಲ ಭೇಟಿ ನಂತರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ ಝಾಯಿ ಇಂದು ಲಂಡನ್ ಗೆ ಮತ್ತೆ ಹಿಂದಿರುಗಿದ್ದಾರೆ.
ಕುಟುಂಬದವರೊಂದಿಗೆ ಮಲಾಲಾ
ಕುಟುಂಬದವರೊಂದಿಗೆ ಮಲಾಲಾ

ಲಂಡನ್ : ಪಾಕಿಸ್ತಾನದ ಮೊದಲ ಭೇಟಿ ನಂತರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ ಝಾಯಿ  ಇಂದು ಲಂಡನ್ ಗೆ ಮತ್ತೆ ಹಿಂದಿರುಗಿದ್ದಾರೆ.
ಮಲಾಲಾ ತಾಲಿಬಾನ್ ಉಗ್ರರ ದಾಳಿಗೊಳಗಾದ ನಂತರ ಸುಮಾರು ಐದು ವರ್ಷಗಳಿಂದಲೂ ಲಂಡನ್ ನಲ್ಲಿಯೇ ನೆಲೆಸಿದ್ದು, ಅಲ್ಲಿಯೇ  ಶಿಕ್ಷಣ ಪಡೆಯುತ್ತಿದ್ದಾರೆ.

20 ವರ್ಷದ ಮಲಾಲಾ, ಮಾರ್ಚ್ 29 ರಂದು ಇಸ್ಲಾಮಾಬಾದ್ ಗೆ ಆಗಮಿಸಿದ್ದರು. ನಾಲ್ಕು ದಿನಗಳ ನಂತರ ಮಲಾಲಾ  ತಮ್ಮ ಪೋಷಕರೊಂದಿಗೆ ಲಂಡನ್ ಗೆ ಹಿಂದಿರುಗಿದ್ದು,  ಪಾಕಿಸ್ತಾನದ ವಿಮಾನ ನಿಲ್ದಾಣದಲ್ಲಿ ಸಂತಸದಲ್ಲಿರುವ ಚಿತ್ರವನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆಕೆಯ ಪ್ರವಾಸವನ್ನು ಗೌಪ್ಯವಾಗಿ ಇಡಲಾಗಿತ್ತು,ಇಸ್ಲಾಮಾಬಾದ್ ಗೆ ಬರುವವರೆಗೂ ಯಾರಿಗೂ ಆಕೆಯ ಪ್ರವಾಸದ ವಿಷಯ ಗೊತ್ತೇ ಇರಲಿಲ್ಲ. ನಂತರ ಬಿಗಿ ಭದ್ರತೆಯ ಹೋಟೆಲ್ ವೊಂದರಲ್ಲಿ ಆಕೆಯನ್ನು ಸುರಕ್ಷಿತವಾಗಿಡಲಾಗಿತ್ತು.

ಭೇಟಿ ವೇಳೆ ಪಾಕಿಸ್ತಾನದ ಪ್ರಧಾನಮಂತ್ರಿ ಶಹೀದ್ ಖಾಕ್ವನ್ ಅಬ್ಬಾಸಿ ಅವರ ನಿವಾಸಿದಲ್ಲಿ ಆಕೆಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ಐದು ವರ್ಷಗಳ ನಂತರ ಪಾಕಿಸ್ತಾನಕ್ಕೆ ಮರಳಿರುವುದು ಕನಸಿನಂತಿದೆ ಎಂದು ಭಾವುಕರಾಗಿ ಮಲಾಲಾ ಕಣ್ಣೀರಿಟ್ಟಿದ್ದಳು. ಅಲ್ಲದೇ, ತನ್ನ ಹುಟ್ಟೂರು ಸ್ವಾತ್ ಜಿಲ್ಲೆಯ ಮಿಂಗೊರಾಗೂ ಮಲಾಲಾ ಭೇಟಿ ನೀಡಿದ್ದರು. ಆಕೆಯ ಮೇಲಿನ ದಾಳಿಗೂ ಮುನ್ನಾ ಅಲ್ಲಿಯೇ ಆಕೆ ಶಾಲೆಗೆ ಹೋಗುತ್ತಿದ್ದಳು.

ಮತ್ತೆ ತನ್ನ ಮಣ್ಣಿಗೆ ಕಾಲಿಟ್ಟಿದ್ದರಿಂದ ಹಾಗೂ ಕುಟುಂಬದವರ  ಮನೆ ನೋಡಿರುವುದರಿಂದ ತುಂಭಾ ಸಂತೋಷಗೊಂಡಿರುವುದಾಗಿ  ಮಲಾಲಾ ಟ್ವೀಟ್ ಮಾಡಿದ್ದಾರೆ.

ಮಲಾಲಾ ಸದ್ಯ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಕೆಯ ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಮತ್ತೆ ಪಾಕಿಸ್ತಾನಕ್ಕೆ ಮರಳುವುದಾಗಿ ಆಕೆ ತಿಳಿಸಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com