ಹೆಚ್ -1ಬಿ ವೀಸಾಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರೀ ಪರಿಶೀಲನೆಯ ಮಧ್ಯೆ ಹೆಚ್-1ಬಿ ವೀಸಾ ನೀಡಿಕೆಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರೀ ಪರಿಶೀಲನೆಯ ಮಧ್ಯೆ ಹೆಚ್-1ಬಿ ವೀಸಾ ನೀಡಿಕೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.

ಅಮೆರಿಕಾದ ನಾಗರಿಕ ಮತ್ತು ವಲಸೆ ಸೇವೆ(ಯುಎಸ್ ಸಿಐಎಸ್) ವೀಸಾ ನೀಡಿಕೆ ಪ್ರಕ್ರಿಯೆಯನ್ನು ನಡೆಸುತ್ತಿದ್ದು ಅದು ಅರ್ಜಿ ಸಲ್ಲಿಕೆ ವೇಳೆ ಸಣ್ಣ ತಪ್ಪುಗಳಾದರೂ ಸಹ ಸಹಿಸುವುದಿಲ್ಲ ಎಂದು ಹೇಳಿದೆ.

ಅತ್ಯತ ಕೌಶಲ್ಯ ಭಾರತೀಯ ವೃತ್ತಿಪರರಿಗೆ ನೀಡುವ ವೀಸಾ ಹೆಚ್-1ಬಿ ವೀಸಾವಾಗಿದೆ.ಇದು ವಲಸೆರಹಿತ ವೀಸಾವಾಗಿದ್ದು ಅಮೆರಿಕಾದ ಕಂಪೆನಿಗಳು ವಿಶೇಷ ವೃತ್ತಿಪರರನ್ನು ನೇಮಿಸಿಕೊಳ್ಳಲು ನೌಕರರಿಗೆ ನೀಡುವ ವೀಸವಾಗಿದೆ.

ಕಳೆದ ತಿಂಗಳು ಆರಂಭದಲ್ಲಿ ಯುಎಸ್ ಸಿಐಎಸ್, ಹೆಚ್-1ಬಿ ವೀಸಾದ ಪ್ರೀಮಿಯಂ ಸಲ್ಲಿಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದು ಎಂದು ಘೋಷಿಸಿತ್ತು.

2019ನೇ ಹಣಕಾಸು ಸಾಲಿಗೆ ವೀಸಾ ನೀಡಿಕೆಗೆ ಅರ್ಜಿಗಳನ್ನು ಏಪ್ರಿಲ್ 2ರಿಂದ ಸ್ವೀಕರಿಸಲಾಗುವುದು. ಮತ್ತು ವಜಾಗೊಳಿಸುವ ಪ್ರಕ್ರಿಯೆ ಸೆಪ್ಟೆಂಬರ್ 10ರವರೆಗೆ ಮುಂದುವರಿಯಲಿದೆ ಎಂದು ಘೋಷಿಸಿತ್ತು.

ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಸರ್ಕಾರ ಹೆಚ್-1ಬಿ ವೀಸಾ ನೀಡುವ ಪ್ರಕ್ರಿಯೆಯನ್ನು ಹೆಚ್ಚು ಕಠಿಣಗೊಳಿಸಿತ್ತು. ಈ ಹೊಸ ವೀಸಾ ನೀತಿಯು ಟ್ರಂಪ್ ಅವರ ಬೈ ಅಮೆರಿಕನ್ ಮತ್ತು ಹೈರ್ ಅಮೆರಿಕನ್ ತಾತ್ವಿಕ ಆದೇಶದ ಭಾಗವಾಗಿದೆ. ಅಮೆರಿಕಾದ ನೌಕರರ ಹಿತಾಸಕ್ತಿಯನ್ನು ಇದು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com