ಹಫೀಜ್ ಸಯೀದ್ ಗೆ ಕಿರುಕುಳ ನೀಡಬೇಡಿ: ಪಾಕ್ ಸರ್ಕಾರಕ್ಕೆ ಲಾಹೋರ್ ಕೋರ್ಟ್ ನಿರ್ದೇಶನ

ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಜ್ ಸಯೀದ್ ಗೆ ಕಿರುಕುಳ ನೀಡದಂತೆ ಪಾಕ್ ಸರ್ಕಾರಕ್ಕೆ ಲಾಹೋರ್ ಕೋರ್ಟ್ ನಿರ್ದೇಶನ ನೀಡಿದೆ.
ಹಫೀಜ್ ಸಯೀದ್
ಹಫೀಜ್ ಸಯೀದ್
ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಜ್ ಸಯೀದ್ ಗೆ ಕಿರುಕುಳ ನೀಡದಂತೆ ಪಾಕ್ ಸರ್ಕಾರಕ್ಕೆ ಲಾಹೋರ್ ಕೋರ್ಟ್ ನಿರ್ದೇಶನ ನೀಡಿದೆ. 
ಹಫೀಜ್ ಸಯೀದ್ ಸಾಮಾಜಿಕ ಒಳಿತಿಗಾಗಿ ನಡೆಸುವ ಚಟುವಟಿಕೆಗಳು ಮುಂದುವರೆಯಬೇಕಿದ್ದು, ಪಾಕಿಸ್ತಾನ ಸರ್ಕಾರ ಆತನಿಗೆ ಕಿರುಕುಳ ನೀಡಬಾರದೆಂದು ಕೋರ್ಟ್ ಹೇಳಿರುವುದನ್ನು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. 
ಇಂದು ಹಫೀಜ್ ಸಯೀದ್ ಗೆ ಕಿರುಕುಳ ನೀಡಬೇಡಿ ಎಂದು ಹೇಳಿರುವ ಕೋರ್ಟ್ ನವೆಂಬರ್ ತಿಂಗಳಲ್ಲಿ ಆತನನ್ನು ಬಂಧನದಿಂದ ಮುಕ್ತಗೊಳಿಸಿತ್ತು. ಈಗ ಅಮೆರಿಕ ಹಫೀಜ್ ಸಯೀದ್ ನ ರಾಜಕೀಯ ಸಂಘಟನೆಯಾದ ಮಿಲ್ಲಿ ಮುಸ್ಲಿಮ್ ಲೀಗ್ ಗೆ ನಿರ್ಬಂಧ ವಿಧಿಸಿ ಉಗ್ರ ಸಂಘಟನೆ ಎಂದು ಘೋಷಿಸಿರುವ ಬೆನ್ನಲ್ಲೇ ಪಾಕ್ ಸರ್ಕಾರಕ್ಕೆ ಲಾಹೋರ್ ಕೋರ್ಟ್ ಹಫೀಜ್ ಸಯೀದ್ ಗೆ ಕಿರುಕುಳ ನೀಡದಂತೆ ನಿರ್ದೇಶನ ನೀಡಿದೆ. 
ತನ್ನ ಸಂಘಟನೆ ನಡೆಸುತ್ತಿರುವ ಸಮಾಜ ಕಲ್ಯಾಣ ಕಾರ್ಯಗಳಿಗೆ ಪಾಕಿಸ್ತಾನ ಸರ್ಕಾರದಿಂದ ಅಡಚಣೆ ಉಂಟಾಗುತ್ತಿದೆ ಎಂದು ಜೆಯುಡಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com