ಭ್ರಷ್ಠಾಚಾರ ಪ್ರಕರಣ: ದ.ಕೊರಿಯಾ ಮೊದಲ ಮಹಿಳಾ ಅಧ್ಯಕ್ಷೆಗೆ 24 ವರ್ಷ ಜೈಲು

ಭ್ರಷ್ಠಾಚಾರ ಪ್ರಕರಣದಡಿಯಲ್ಲಿ ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷೆ ಪಾರ್ಕ್ ಜಿಯುನ್ ಹೈಅವರಿಗೆ ಕೊರಿಯನ್ ನ್ಯಾಯಾಲಯವು 24 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪಾರ್ಕ್ ಜಿಯುನ್ ಹೈ
ಪಾರ್ಕ್ ಜಿಯುನ್ ಹೈ
ಸಿಯೋಲ್(ದಕ್ಷಿಣ ಕೊರಿಯಆ): ಭ್ರಷ್ಠಾಚಾರ ಪ್ರಕರಣದಡಿಯಲ್ಲಿ ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷೆ ಪಾರ್ಕ್ ಜಿಯುನ್ ಹೈಅವರಿಗೆ ಕೊರಿಯನ್ ನ್ಯಾಯಾಲಯವು 24 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಲಂಚ, ಅಧಿಕಾರ ದುರುಪಯೋಗ, ಭ್ರಷ್ಠಾಚಾರ ಸೇರಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಪಾರ್ಕ್ ತಪ್ಪಿತಸ್ಥರೆಂದು ನ್ಯಾಯಾಲಯವು ಹೇಳಿದ್ದು ಈ ಸಂಬಂಧ ಕಳೆದ 10 ತಿಂಗಳಿನಿಂದ ನಡೆಯುತ್ತಿದ್ದ ವಿಚಾರಣೆ ಅಂತ್ಯ ಕಂಡಿದೆ.
2017ರಲ್ಲಿ ಅಧ್ಯಕ್ಷೆ ಪಾರ್ಕ್ ವಿರುದ್ಧ ಭ್ರಷ್ಠಾಚಾರ ನಡೆಸಿರುವ ಆರೋಪ ಕೇಳಿಬಂದಿದ್ದು ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದಿದ್ದವು.
ತೀರ್ಪಿನ ಕುರಿತಂತೆ ಪ್ರತಿಕ್ರಯಿಸಿರುವ ಪಾರ್ಕ್ ಉತ್ತರಾಧಿಕಾರಿ "ಇದಿ ದೇಶ ಹಾಗೂ ರಾಷ್ಟ್ರಾಧ್ಯಕ್ಷರಾಗಿದ್ದ ಪಾರ್ಕ್  ಇಬ್ಬರ ಪಾಲಿಗೆ ಹೃದಯ ಚೂರಾಗಿಸುವ ಸಂಗತಿಯಾಗಿದೆ" ಎಂದು ವಿಶ್ಲೇಷಿಸಿದರು.
ಪಾರ್ಕ್‌ ಜಿಯುನ್‌ ಹೈ, ದಕ್ಷಿಣ ಕೊರಿಯಾದ ಮೊದಲ ಮಹಿಳಾ ಅಧ್ಯಕ್ಷಯಾಗಿದ್ದು ಇದೀಗ ರಾಷ್ಟ್ರದ ಮೊದಲ ಮಹಿಳಾ ಅಧ್ಯಕ್ಷೆಯೇ ಜೈಲುಪಾಲಾಗಿರುವುದು ವಿಪರ್ಯಾಸ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com