ಈಕ್ವಟೊರಿಯಲ್ ನಲ್ಲಿ ಭಾರತದ ರಾಜತಾಂತ್ರಿಕ ಕಚೇರಿ ಸದ್ಯದಲ್ಲೇ ಆರಂಭ: ರಾಷ್ಟ್ರಪತಿ ಕೋವಿಂದ್
ಮಲಬೊ(ಈಕ್ವಟೋರಿಯಲ್ ಗಿನಿಯಾ): ಎರಡೂ ದೇಶಗಳ ಮಧ್ಯೆ ರಾಜತಾಂತ್ರಿಕ ಸಂಬಂಧವನ್ನು ವೃದ್ಧಿಸಲು ಈಕ್ವಟೊರಿಯಲ್ ಗಿನಿಯಾದಲ್ಲಿ ರಾಯಭಾರ ಕಚೇರಿಯನ್ನು ಭಾರತ ಶೀಘ್ರದಲ್ಲಿಯೇ ತೆರೆಯಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.
ತಮ್ಮ ಭೇಟಿ ಸಂದರ್ಭದಲ್ಲಿ ಇಲ್ಲಿನ ಸಂಸದೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮಗೆ ಅಭೂತಪೂರ್ವ ಸ್ವಾಗತ ನೀಡಿದ್ದಕ್ಕೆ ಅಲ್ಲಿನ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ನಾನಿಲ್ಲಿಗೆ 1.3 ಶತಕೋಟಿ ಭಾರತೀಯರ ಕೃತಜ್ಞತೆ, ಔದಾರ್ಯ, ಸ್ನೇಹಭಾತೃತ್ವ ಮತ್ತು ಬದ್ಧತೆಗೋಸ್ಕರ ಬಂದಿದ್ದೇನೆ. ಸಾಗರದಲ್ಲಿನ ಒಂದೊಂದು ಹನಿ ನೀರಿನಂತೆ ಇಂದು ನಮ್ಮ ನಾಗರಿಕತೆ ಒಂದಾಗಿದೆ. ಎರಡೂ ದೇಶಗಳ ಮಧ್ಯೆ ರಾಜತಾಂತ್ರಿಕತೆ ಒಟ್ಟು ಸೇರುತ್ತಿದ್ದು ಸದ್ಯದಲ್ಲಿಯೇ ಭಾರತದ ರಾಜತಾಂತ್ರಿಕತೆ ಈಕ್ವಟೊರಿಯಲ್ ಗಿನಿಯಾ ನಗರದಲ್ಲಿ ರಾಜತಾಂತ್ರಿಕ ಕಚೇರಿ ಆರಂಭವಾಗಲಿದೆ ಎಂದು ಹೇಳಿದರು.
ಮಲಬೊದಲ್ಲಿ ಭಾರತೀಯ ಸಮುದಾಯಗಳೊಂದಿಗೆ ಸಂವಾದ ನಡೆಸಿದ ರಾಷ್ಟ್ರಪತಿ ಕೋವಿಂದ್, ಈಕ್ವಟೊರಿಯಲ್ ಗಿನಿಯಾದ ರಾಷ್ಟ್ರಪತಿಗಳು ತಮಗೆ ಅಲ್ಲಿನ ಅತ್ಯುನ್ನತ ನಾಗರಿಕ ಗೌರವ ಪುರಸ್ಕಾರ ನೀಡಿರುವುದು ಅತ್ಯಂತ ಖುಷಿ ತಂದಿದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ