ಫೇಸ್ ಬುಕ್ ಡೇಟಾ ಸೋರಿಕೆ ಪ್ರಕರಣಕ್ಕೆ ನಾನೇ ಹೊಣೆ, ನನ್ನನ್ನು ಕ್ಷಮಿಸಿ: ಮಾರ್ಕ್ ಜುಕರ್‌ಬರ್ಗ್‌

ಖಾಸಗಿ ವಿವರಗಳನ್ನು ರಕ್ಷಿಸಲು ವಿಫಲವಾದ ಸಾಮಾಜಿಕ ತಾಣ ಫೇಸ್ ಬುಕ್ ವೈಫಲ್ಯದ ಜವಾಬ್ದಾರಿಯನ್ನು ಫೆಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಒಪ್ಪಿಕೊಂಡಿದ್ದಾರೆ
ವಾಷಿಂಗ್ ತನ್ ಕ್ಯಾಪಿಟಲ್ ಹಿಲ್ಸ್ ಗೆ ಆಗಮಿಸಿದ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌
ವಾಷಿಂಗ್ ತನ್ ಕ್ಯಾಪಿಟಲ್ ಹಿಲ್ಸ್ ಗೆ ಆಗಮಿಸಿದ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌
ವಾಷಿಂಗ್ ಟನ್: ಖಾಸಗಿ ವಿವರಗಳನ್ನು ರಕ್ಷಿಸಲು ವಿಫಲವಾದ ಸಾಮಾಜಿಕ ತಾಣ ಫೇಸ್ ಬುಕ್ ವೈಫಲ್ಯದ ಜವಾಬ್ದಾರಿಯನ್ನು ಫೆಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌  ಒಪ್ಪಿಕೊಂಡಿದ್ದಾರೆ
ಇವರು ಸೋಮವಾರ  ಅಮೇರಿಕ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ ಮುಂದೆ ಕೇಂಬ್ರಿಡ್ಜ್ ಅನಾಲಿಟಿಕಾ ಮಾಹಿತಿ ಸೋರಿಕೆ ಸಂಬಂಧ ಸಾಕ್ಷಿಯಾಗಿದ್ದಾರೆ.
"ನಾನು ಈ ಬಗ್ಗೆ ಸಾಕಷ್ಟು ಜವಾಬ್ದಾರಿಯುತ ಕ್ರಮ ತೆಗೆದುಕೊಳ್ಳುವುದರಲ್ಲಿ ವಿಫಲನಾಗಿದ್ದೇನೆ. ನನ್ನ ತಪ್ಪನ್ನು ಕ್ಷಮಿಸಿ. .ಅಮೆರಿಕಾ ಕಾಂಗ್ರೆಸ್ ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಪೆನಾಲ್ ಬಿಡುಗಡೆಗೊಳಿಸಿದ ಲಿಖಿತ ಸಾಕ್ಷ್ಯದಲ್ಲಿ ಜುಕರ್‌ಬರ್ಗ್‌ ಈ ಹೇಳಿಕೆ ದಾಖಲಾಗಿದೆ.
"ನಾನು ಫೇಸ್ ಬುಕ್ ಪ್ರಾರಂಭ ಮಾಡಿದ್ದು  ಅದನ್ನು ಮುನ್ನಡೆಸಿಕೊಂಡು ಹೋಗುವೆನು. ಅಲ್ಲಿ ಏನೇ ಆದರೂ ಅದಕ್ಕೆ ನಾನು ಜವಾಬ್ದಾರನಾಗಿರುತ್ತೇನೆ."
ಡೋನಾಲ್ಡ್ ಟ್ರಂಪ್ ಅವರ ಆಯ್ಕೆಗೆ ಸಹಾಕಾರಿಯಾಗಿ ಕೆಲಸ ಮಾಡಿದ್ದ ಬ್ರಿಟಿಷ್ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾದಿಂದ ಲಕ್ಷಾಂತರ  ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಕಾನೂನುಬಾಹಿರವಾಗಿ  ಪಡೆದುಕೊಳ್ಳಲಾಗಿತ್ತು. 
ಫೇಸ್ ಬುಕ್ ಒಂದು  "ಆದರ್ಶವಾದಿ ಮತ್ತು ಆಶಾವಾದಿ ಸಂಸ್ಥೆ" ಎಂದಿರುವ ಜುಕರ್ಬರ್ಗ್ "ಜನರು ಸಂಪರ್ಕ ಸಾಧಿಸಲು ಏನು ಬೇಕಿದೆಯೋ ಅದನ್ನು ನಾವು ನೀಡುತ್ತೇವೆ" ಎಂದು ತಮ್ಮ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಆದರೆ ಕೆಲವೊಮ್ಮೆ ಮಾಹಿತಿಗಳು ಪೋಲಾಗದಂತೆ ತಡೆಯಲು ನಾವು ಸಾಕಷ್ಟು ಕ್ರಮ ತೆಗೆದುಕೊಂಡಿರಲಿಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ.ನಕಲಿ ಸುದ್ದಿಗಳು, ಚುನಾವಣೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಮತ್ತು ಪ್ರಚೋದನಾಕಾರಿ ಭಾಷಣ ಸೇರಿ ದತ್ತಾಂಶದ ಸುರಕ್ಷತೆಯಲ್ಲಿ ನಾವು  ವಿಫಲವಾಗಿದ್ದೇವೆ."
ಕೇಂಬ್ರಿಜ್ ಅನಾಲಿಟಿಕಂತಹ ಮೂರನೇ ವ್ಯಕ್ತಿಗಳಿಂದ ಮಾಹಿತಿ ಕಬಳಿಕೆ ತಪ್ಪಿಸುವ ಉದ್ದೇಶದಿಂದ ಫೇಸ್ ಬುಕ್ ಮುಂದೆ ತೆಗೆದುಕೊಳ್ಳಲಿರುವ ಸುರಕ್ಷತಾ ಕ್ರಮದ ಕುರಿತು ಜುಕರ್‌ಬರ್ಗ್‌ ವಿವರಿಸಿದರು.
"ನಾವು 2014ರ ಮುನ್ನಿನ ನಮ್ಮ ವೇದಿಕೆ ಮುಚ್ಚುವ ಮುನ್ನ ಹೆಚ್ಚಿನ ಪ್ರಮಾಣದ ಮಾಹಿತಿಯನ್ನೊಳಗೊಂಡ ಪ್ರತಿ ಅಪ್ಲಿಕೇಶನ್ ಗಳನ್ನೂ ತನಿಖೆ ನಡೆಸಲಿದ್ದೇವೆ" ಎಂದು ಕ್ಯಾಪಿಟಲ್ ಹಿಲ್ ನಲ್ಲಿ ಜುಕರ್‌ಬರ್ಗ್‌ ಹೇಳಿಕೆ ನೀಡುತ್ತಾ ತಿಳಿಸಿದ್ದಾರೆ.
"ಅನುಮಾನಾಸ್ಪದ ಚಟುವಟಿಕೆ ಕಂಡರೆ ಅದಕ್ಕೆ ಪ್ರತಿಯಾಗಿ ನಾವು ಸಂಪೂರ್ಣ ಫೋರೆನ್ಸಿಕ್ ಆಡಿಟ್ ಮಾಡುತ್ತೇನೆ ಮತ್ತು ಒಬ್ಬ ವ್ಯಕ್ತಿಯು ಡೇಟಾವನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ ಎಂದು ನಾವು ಕಂಡುಕೊಂಡರೆ, ನಾವು ಅವರ ಅಕೌಂಟ್ ನ್ನು ನಿಷೇಧಿಸುತ್ತೇವೆ. ಇದು ಎಲ್ಲರ ಮೇಲೆ ದುಷ್ಪರಿಣಾಮ ಬೀರುತ್ತದೆಂದು ಹೇಳುತ್ತೇವೆ" ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com