ಡೈನೊಸರ್ ಕೊಳ್ಳಬೇಕೇ? ಪ್ಯಾರಿಸ್ ನಲ್ಲಿ ಮಾರಾಟಕ್ಕಿವೆ!

ಅಲ್ಲೊಸರಸ್ ಮತ್ತು ಡಿಪ್ಲೊಡೋಕಸ್ ಡೈನೊಸರ್ ಅಸ್ಥಿಪಂಜರಗಳನ್ನು ಈ ವಾರ ಪ್ಯಾರಿಸ್ ನಲ್ಲಿ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ಯಾರಿಸ್: ಅಲ್ಲೊಸರಸ್ ಮತ್ತು ಡಿಪ್ಲೊಡೋಕಸ್ ಡೈನೊಸರ್ ಅಸ್ಥಿಪಂಜರಗಳನ್ನು ಈ ವಾರ ಪ್ಯಾರಿಸ್ ನಲ್ಲಿ ಮಾರಾಟಕ್ಕಿಡಲಾಗಿದೆ.ಇದನ್ನು ಆಂತರಿಕ ವಿನ್ಯಾಸ ವಸ್ತುವಾಗಿ ಮಾರಾಟಕ್ಕಿಡಲಾಗುತ್ತಿದೆ.

ಇಂದು ಪಳೆಯುಳಿಕೆ ಮಾರುಕಟ್ಟೆ ಕೇವಲ ವಿಜ್ಞಾನಿಗಳಿಗೆ ಮಾತ್ರವಾಗಿ ಉಳಿದಿಲ್ಲ ಎಂದು ಹರಾಜು ಮನೆಯ ಬಿನೊಚೆ ಮತ್ತು ಗಿಕೆಲ್ಲೊನ ಲೊಕೊಪೊ ಬ್ರಿಯಾನೊ ಹೇಳುತ್ತಾರೆ. ಇಲ್ಲಿ ನಾಳೆ ಪಳೆಯುಳಿಕೆಗಳ ಹರಾಜು ನಡೆಯಲಿದೆ.

ಡೈನೋಸಾರ್ ಗಳ ಅಸ್ಥಿಪಂಜರಗಳು ಕೋಣೆಯೊಳಗೆ ತಂಪಾದ, ಹೊಸ ಶೈಲಿಯನ್ನು ನೀಡುತ್ತವೆ. ವರ್ಣಚಿತ್ರಗಳಂತೆ ಅಲಂಕಾರವನ್ನು ನೀಡುತ್ತವೆ. ಹಾಲಿವುಡ್ ನಟರಾದ ಲಿಯನಾರ್ಡೊ ಡಿಕಾಪ್ರಿಯೊ ಮತ್ತು ನಿಕೊಲಸ್ ಕೇಜ್ ಇಂತಹ ಡೈ ನೊಸರ್ ಪಳೆಯುಳಿಕೆಗಳನ್ನು ಇಷ್ಟಪಡುತ್ತಾರೆ.

ಡೈನೊಸರ್ ಗಳ ಮೂಳೆಗಳನ್ನು ಸುಮಾರು 1.5 ದಶಲಕ್ಷ ಯುರೊಗಳಿಗೆ ಹರಾಜು ಆಗುವ ನಿರೀಕ್ಷೆಯಿದೆ. 

ಕಳೆದ ಎರಡು-ಮೂರು ವರ್ಷಗಳಲ್ಲಿ ಚೀನಿಯರು ಪಾಲಿಯಾಂಟೊಲಜಿ ಮೇಲೆ ಒಲವು ತೋರುತ್ತಿದ್ದು ಮನೆಗಳಲ್ಲಿ, ವಸ್ತು ಸಂಗ್ರಹಾಲಯಗಳಲ್ಲಿ ಡೈನೊಸರ್ ಪಳೆಯುಳಿಕೆಗಳನ್ನು ಕಾಣಲು ಬಯಸುತ್ತಾರೆ ಎನ್ನುತ್ತಾರೆ ಬ್ರಿಯಾನೊ.

ಪ್ರತಿವರ್ಷ ಸುಮಾರು 5 ಡೈನೊಸರ್ ಗಳನ್ನು ಹರಾಜಿಗಿಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com