ಇಂಗ್ಲೆಂಡಿಗೆ ಭಾರತದ ಹೈ ಕಮಿಷನರ್ ವೈಕೆ ಸಿನ್ಹ
ವಿದೇಶ
ಭಾರತ-ಪಾಕಿಸ್ತಾನದ ಮಧ್ಯೆ ಯಾವುದೇ ಸಭೆ ಆಯೋಜಿಸಿಲ್ಲ: ಇಂಗ್ಲೆಂಡ್ ಭಾರತ ರಾಯಭಾರಿ
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಲಂಡನ್ ನಲ್ಲಿ ಕಾಮನ್ ವೆಲ್ತ್ ಕೇಂದ್ರದ ...
ಲಂಡನ್: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಲಂಡನ್ ನಲ್ಲಿ ಕಾಮನ್ ವೆಲ್ತ್ ಕೇಂದ್ರದ ಸರ್ಕಾರಿ ಸಭೆಯ ಹೊರಗೆ ಯಾವುದೇ ದ್ವಿಪಕ್ಷೀಯ ಸಭೆಯನ್ನು ಯೋಜಿಸಿಲ್ಲ ಎಂದು ಇಂಗ್ಲೆಂಡ್ ಗೆ ಭಾರತದ ಹೈ ಕಮಿಷನರ್ ವೈಕೆ ಸಿನ್ಹ ಪ್ರತಿಪಾದಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಈಗಾಗಲೇ ಪಾಕಿಸ್ತಾನದ ಜೊತೆಗೆ ದ್ವಿಪಕ್ಷೀಯ ಮಾತುಕತೆ ಏರ್ಪಡಿಸಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ವಿಷಯದಲ್ಲಿ ನಾನು ತಿಳಿದಿರುವ ಮಟ್ಟಿಗೆ ಯಾವುದೇ ಬದಲಾವಣೆಯಿಲ್ಲ ಎಂದು ವೈಕೆ ಸಿನ್ಹ ತಿಳಿಸಿದ್ದಾರೆ.
ಭಯೋತ್ಪಾದನೆ ಮತ್ತು ಆರ್ಥಿಕ ಅಪರಾಧಿತನದ ವಿಷಯಗಳು ಭೇಟಿಯ ಸಂದರ್ಭದಲ್ಲಿ ಗಮನ ಕೇಂದ್ರಿತವಾಗಿರುತ್ತದೆ ಎಂದು ಹೇಳಿದರು.

