ರಾವಲ್ಪಿಂಡಿ ಗ್ರಾಮಕ್ಕೆ ನೋಬೆಲ್ ಪುರಸ್ಕೃತೆ ಮಲಾಲಾ ಹೆಸರು

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿ ಜಿಲ್ಲೆಯ ಗ್ರಾಮವೊಂದಕ್ಕೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಲಾಲ ಯೂಸಫ್ ಝಾಯಿ ಹೆಸರನ್ನು ಇಡಲಾಗಿದೆ.
ಮಲಾಲ ಯೂಸಫ್ ಝಾಯಿ
ಮಲಾಲ ಯೂಸಫ್ ಝಾಯಿ
ರಾವಲ್ಪಿಂಡಿ(ಪಾಕಿಸ್ತಾನ): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿ ಜಿಲ್ಲೆಯ ಗ್ರಾಮವೊಂದಕ್ಕೆ  ನೊಬೆಲ್ ಪ್ರಶಸ್ತಿ ಪುರಸ್ಕೃತ ಮಲಾಲ ಯೂಸಫ್ ಝಾಯಿ ಹೆಸರನ್ನು ಇಡಲಾಗಿದೆ
ಸಾಮಾಜಿಕ ಕಾರ್ಯಕರ್ತ ಬಸೀರ್ ಅಹಮದ್ ಈ ಸುದ್ದಿಯನ್ನು ಟ್ವಿಟ್ಟರ್ ಕಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾವಲ್ಪಿಂಡಿಯ ’ಗುಜರ್ ಖಾನ್’ ಸಮೀಪದ ಗ್ರಾಮಕ್ಕೆ ಮಲಾಲಾ ಎಂದು ನಾಮಕರಣ ಮಾಡಲಾಗಿದೆ - ಅಹಮದ್ ಟ್ವಿಟ್ ಮಾಡಿದ್ದಾರೆ.
ಆರು ವರ್ಷಗಳ ಕಾಲ ವಿದೇಶದಲ್ಲಿ ಕಳೆದಿದ್ದ ಮಲಾಲಾ ಕಳೆದ ತಿಂಗಳು ತನ್ನ ತವರು ರಾಷ್ಟ್ರಕ್ಕೆ ಆಗಮಿಸಿದ್ದರು. ತನ್ನ ಸ್ವಂತ ಸ್ಥಳವಾದ ಸ್ವ್ಯಾತ್ ಕಣಿವೆಗೆ ಆಗಮಿಸಿದ್ದ ಮಲಾಲಾ ಮಹಿಳಾ ಸಬಲೀಕರಣದ  ಕುರಿತು ವಿಚಾರ ವಿನಿಮಯ ನಡೆಸಿದ್ದರು.
ಈ ಪ್ರವಾಸದ ವೇಳೆ ಪಾಕಿಸ್ತಾನ ಪ್ರಧಾನಿ ಶಾಹಿದ್ ಖಕಾನ್‌ ಅಬ್ಬಾಸಿಯವರನ್ನು ಮಲಾಲಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಅವರ ಆಗಮನವನ್ನು ರಹಸ್ಯವಾಗಿರಿಸಲಾಗಿತ್ತು.
ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಲಾಲಾಳ ಮೇಲೆ  ಅಕ್ಟೋಬರ್ 2012ರಲ್ಲಿ ತಾಲಿಬಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಹತ್ಯಾ ಪ್ರಯತ್ನದಿಂದ ಪಾರಾದ ಮಲಾಲಾ ತಾವು ಪಾಕಿಸ್ತಾನವನ್ನು ತೊರೆದಿದ್ದರು.
ದಾಳಿಯ ವೇಳೆ ಉಗ್ರರು ಅವರ ತಲೆ ಬಾಗಕ್ಕೆ ಗುಂಡು ಹಾರಿಸಿದ್ದರು. ಆದರೆ ಅಪಾಯದಿಂದ ಪಾರಾದ ಮಲಾಲಾ ಪೆಶಾವರ್  ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿಂದ ಹೆಚ್ಚುವರಿ ಚಿಕಿತ್ಸೆಗಾಗಿ ಅವರನ್ನು ಲಂಡನ್ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com