ಲಂಡನ್: ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಮ್ ಅವರ ಪತ್ನಿ ಕೇಟ್ ಮಿಡ್ಲ್ಟನ್ ಅವರು ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ರಾಜದಂಪತಿಗೆ ಇದು ಮೂರನೇ ಮಗು.
ಕೇಟ್ ಮಿಡ್ಲ್ಟನ್ ಅವರು ಇಂದು ಬೆಳಗ್ಗೆ 11 ಗಂಟೆ 1 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಕೆನ್ಸಿಂಗ್ ಟನ್ ಅರಮನೆ ಘೋಷಿಸಿದೆ.
ರಾಯಲ್ ದಂಪತಿಯ ಮೊದಲ ಮಗ ಪ್ರಿನ್ಸ್ ಜಾರ್ಜ್ ಗೆ ಈಗ ನಾಲ್ಕು ವರ್ಷವಾಗಿದ್ದು, ಮಗಳು ಪ್ರಿನ್ಸಸ್ ಚಾರ್ಲೊಟ್ ಗೆ ಎರಡು ವರ್ಷವಾಗಿದೆ.
ರಾಣಿ ಎರಡನೇ ಎಲಿಜಬೆತ್, ವಿಲಿಯಮ್ ಅವರ ತಂದೆ ಪ್ರಿನ್ಸ್ ಚಾರ್ಲೆಸ್ ಹಾಗೂ ಅವರ ಸಹೋದರ ಪ್ರಿನ್ಸ್ ಹ್ಯಾರಿ ಅವರು ಮೂರನೇ ಮಗುವಿನ ಸುದ್ದಿ ತಿಳಿಸಲು ಹರ್ಷವಾಗುತ್ತಿದೆ ಎಂದು ಅರಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.