ಪಾಕಿಸ್ತಾನದ ರಕ್ಷಣಾ ಬಜೆಟ್ ನಲ್ಲಿ ಶೇ. 10 ರಷ್ಟು ಹೆಚ್ಚಳ

ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ನಿನ್ನೆ ಮಂಡಿಸಿದ 2018-19 ನೇ ಸಾಲಿನ ಬಜೆಟ್ ನಲ್ಲಿ ರಕ್ಷಣಾ ಕ್ಷೇತ್ರದಲ್ಲಿನ ವೆಚ್ಚಕ್ಕಾಗಿ ಶೇ.10 ರಷ್ಟನ್ನು ಹೆಚ್ಚಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್ : ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್  ನಿನ್ನೆ ಮಂಡಿಸಿದ 2018-19 ನೇ ಸಾಲಿನ ಬಜೆಟ್ ನಲ್ಲಿ ರಕ್ಷಣಾ ಕ್ಷೇತ್ರದಲ್ಲಿನ ವೆಚ್ಚಕ್ಕಾಗಿ ಶೇ.10 ರಷ್ಟನ್ನು ಹೆಚ್ಚಿಸಲಾಗಿದೆ.

ಆರೋಗ್ಯ. ಶಿಕ್ಷಣ ಮತ್ತು ಸಾಮಾಜಿಕ  ಕಾರ್ಯಕ್ರಮಗಳಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ ಎಂದು ಇಸ್ಮಾಯಿಲ್  ಅವರು ತಿಳಿಸಿದ್ದಾರೆ.

ರಕ್ಷಣ ಉಪಕರಣಕ್ಕಾಗಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಮೀಸಲಿಟ್ಟಿರುವ ಹಣದ ಪ್ರಮಾಣ 1 ಟ್ರಿಲಿಯನ್ ಮಾರ್ಕ್ ದಾಟಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ 180 ಬಿಲಿಯನ್ ಹೆಚ್ಚಳಗೊಂಡಿರುವುದು ಕಂಡುಬಂದಿದೆ.

ಇದಲ್ಲದೇ, ಸೇನಾ ಸಿಬ್ಬಂದಿಯ ಪಿಂಚಣಿಗಾಗಿ 260 ಬಿಲಿಯನ್ ಮೀಸಲಿಡಲಾಗಿದೆ. ಅದನ್ನು ನಾಗರಿಕ ಬಜೆಟ್ ನಿಂದ ನೀಡಲಾಗುತ್ತಿದೆ. ಒಟ್ಟು ರಕ್ಷಣಾ ಬಜೆಟ್  ಹೊರಗೆ ಪಾಕಿಸ್ತಾನ ಪಾಕಿಸ್ತಾನ ಸೇನೆಗೆ ಶೇ.47, ವಾಯುಪಡೆಗೆ ಶೇ, 20, ನೌಕದಳಕ್ಕೆ ಶೇ.10 ರಷ್ಟು ಪಿಂಚಣಿ ಪಡೆಯಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

2018-19 ನೇ ಸಾಲಿನ ಬಜೆಟ್ ದಾಖಲೆ ಪ್ರಕಾರ, 1, 100 ಬಿಲಿಯನ್ ಬಜೆಟ್ ನಲ್ಲಿ 423 ಬಿಲಿಯನ್ ನೌಕರರ ಸಂಬಂಧಿತ ವೆಚ್ಚಕ್ಕಾಗಿ ಮೀಸಲಿಡಲಾಗಿದೆ. 

ಕಾರ್ಯಾಚರಣೆ ವೆಚ್ಚಕ್ಕಾಗಿ 253.5 ಬಿಲಿಯನ್ , ಸ್ಥಳೀಯ ವೆಚ್ಚ ಮತ್ತು ಶಸ್ತ್ರಾಸ್ತ್ರಗಳ ಆಮದಿಗಾಗಿ 282 ಬಿಲಿಯನ್, ಮತ್ತು ನಾಗರಿಕ ಕೆಲಸಗಳಿಗಾಗಿ 141 ಬಿಲಿಯನ್ ಮೀಸಲಿಡಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com