ದುಬೈ: ವಿದೇಶಿಗರಿಗೆ ಮೂರು ತಿಂಗಳ ವೀಸಾ ಆಮ್ನೆಸ್ಟಿ ಯೋಜನೆಗೆ ಯುಎಇ ಬುಧವಾರ ಚಾಲನೆ ನೀಡಿದ್ದು, ಭಾರತೀಯರು ಸೇರಿದಂತೆ ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ನೆಲೆಸಿರುವ ವಿದೇಶಿಗರು ನಿಟ್ಟುಸಿರು ಬಿಡುವಂತಾಗಿದೆ.
'ನಿಮ್ಮ ಸ್ಥಿತಿಯನ್ನು ಸರಿಪಡಿಸಿಕೊಳ್ಳುವ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ' ಎಂಬ ಘೋಷಣೆಯಡಿ ವೀಸಾ ಆಮ್ನೆಸ್ಟಿಗೆ ಇಂದು ಚಾಲನೆ ನೀಡಲಾಗಿದ್ದು, ಇದು ಯುಎಇಯಲ್ಲಿ ಅಕ್ರಮವಾಗಿ ನೆಲೆಸಿರುವವರು ತಮ್ಮ ಮುಂದಿನ ದಾರಿ ಕಂಡುಕೊಳ್ಳಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮವಾಗಿ ನೆಲೆಸಿರುವವರು ಮೂರು ತಿಂಗಳಲ್ಲಿ ಆಮ್ನೆಸ್ಟಿ ಯೋಜನೆಯಡಿ ಯಾವುದೇ ಶಿಕ್ಷೆಗೆ ಒಳಗಾಗದೆ ದೇಶವನ್ನು ತ್ಯಜಿಸುವ ಅಥವಾ ಅಗತ್ಯ ಶುಲ್ಕಗಳನ್ನು ಪಾವತಿಸಿ ಕಾನೂನಾತ್ಮಕವಾಗಿ ವೀಸಾ ಅವಧಿಯನ್ನು ವಿಸ್ತರಿಸಿಕೊಳ್ಳಲು ಮತ್ತು ಉದ್ಯೋಗಿ ಹುಡುಕಿಕೊಳ್ಳಲು ಆರು ತಿಂಗಳ ಕಾಲವಕಾಶ ನೀಡಲಾಗಿದೆ.