ಕಾಮನ್ವೆಲ್ತ್ ನ ಭಾಗವಾಗಿರುವ ಆಂಟಿಗುವಾ ಚೋಕ್ಸಿಯನ್ನು ವಶಕ್ಕೆ ಒಪ್ಪಿಸಬಹುದು: ಎಂಇಎ

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾದ ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿಯ ಆಂಟಿಗುವಾ ಪೌರತ್ವ ವಿವಾದದ ಬಗ್ಗೆ ವಿದೇಶಾಂಗ ಇಲಾಖೆ
ಕಾಮನ್ವೆಲ್ತ್ ನ ಭಾಗವಾಗಿರುವ ಚೋಕ್ಸಿಯನ್ನು ವಶಕ್ಕೆ ಒಪ್ಪಿಸಬಹುದು: ಎಂಇಎ
ಕಾಮನ್ವೆಲ್ತ್ ನ ಭಾಗವಾಗಿರುವ ಚೋಕ್ಸಿಯನ್ನು ವಶಕ್ಕೆ ಒಪ್ಪಿಸಬಹುದು: ಎಂಇಎ
ನವದೆಹಲಿ: ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾದ ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿಯ ಆಂಟಿಗುವಾ ಪೌರತ್ವ ವಿವಾದದ ಬಗ್ಗೆ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಆಂಟಿಗುವಾ ಚೋಕ್ಸಿಯನ್ನು ಈಗಲೂ ಭಾರತದ ವಶಕ್ಕೆ ಒಪ್ಪಿಸಬಹುದು ಎಂದು ಹೇಳಿದೆ. 
ಭಾರತದ 1962 ರ ಗಡಿಪಾರು ಕಾಯ್ದೆಯ ನಿಬಂಧನೆಗಳು ಆಂಟಿಗುವಾ ಹಾಗೂ ಬರ್ಬುಡಾಗೂ ಅನ್ವಯವಾಗಲಿವೆ.  ಆಂಟಿಗುವಾ ಕಾಮನ್ ವೆಲ್ತ್ ರಾಷ್ಟ್ರವಾಗಿರುವುದರಿಂದ ಈ ಅಂಶ ಅನ್ವಯವಾಗಲಿದೆ ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ. 
ಎರಡೂ ರಾಷ್ಟ್ರಗಳು ಕಾಮನ್ವೆಲ್ತ್ ರಾಷ್ಟ್ರಗಳಾಗಿರುವುದರಿಂದ ಮೆಹುಲ್ ಚೋಕ್ಸಿಯನ್ನು ನಿರ್ದಿಷ್ಟ ದ್ವಿಪಕ್ಷೀಯ ಒಪ್ಪಂದದ ಹೊರತಾಗಿಯೂ  ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಆಂಟಿಗುವಾ ಹೇಳಿದೆ ಅಲ್ಲಿನ ಎಕ್ಸ್ಟ್ರಾಡಿಶನ್ ಕಾಯ್ದೆ 1993 ರ ಸೆಕ್ಷನ್ 7 ರ ಪ್ರಕಾರ ಚೋಕ್ಸಿಯನ್ನು ಭಾರತಕ್ಕೆ ಒಪ್ಪಿಸುವ ನವದೆಹಲಿಯ ಮನವಿಗೆ ಆಂಟಿಗುವ ಸ್ಪಂದಿಸಬಹುದಾಗಿದ್ದು, ಸಿಬಿಐ ಈಗಾಗಲೇ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಎಂಇಎ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com