9/11ರ "ವಿಮಾನ ಹೈಜಾಕರ್" ಪುತ್ರಿಯೊಡನೆ ಒಸಾಮಾ ಪುತ್ರನ ಮದುವೆ!

ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್‌ ಅಮೆರಿಕಾದ 9/11/2001 ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ಮೊಹಮ್ಮದ್‌ ಅಟ್ಟಾ ಪುತ್ರಿಯನ್ನು ವಿವಾಹವಾಗಿದ್ದಾ
ಹಮ್ಜಾ ಬಿನ್ ಲಾಡೆನ್‌
ಹಮ್ಜಾ ಬಿನ್ ಲಾಡೆನ್‌
Updated on
ಲಂಡನ್: ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್‌ ಅಮೆರಿಕಾದ 9/11/2001 ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ಮೊಹಮ್ಮದ್‌ ಅಟ್ಟಾ ಪುತ್ರಿಯನ್ನು ವಿವಾಹವಾಗಿದ್ದಾನೆ.
9/11ರ ದಾಳಿಯಲ್ಲಿ ಮೊಹಮ್ಮದ್‌ ಅಟ್ಟಾ ವಿಮಾನ ಹೈಜಾಕರ್ ಆಗಿದ್ದನು. ’ದಿ ಗಾರ್ಡಿಯನ್’ ಪತ್ರಿಕೆಗೆ ಒಸಾಮಾ ಬಿನ್ ಲಾಡೆನ್‌ ಕುಟುಂಬದ ಅಹ್ಮದ್‌ ಮತ್ತು ಹಸನ್‌ ಅಲ್ ಅಟ್ಟಾಸ್‌ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
"ಮೊಹಮ್ಮದ್‌ ಅಟ್ಟಾ ಮಗಳನ್ನು ಹಮ್ಜಾ ವಿವಾಹವಾಗಿದ್ದಾನೆ. ಅವನು ಈಗೆಲ್ಲಿದ್ದಾನೆ ಎನ್ನುವುದು ನನಗೆ ತಿಳಿದಿಲ್ಲ, ಆದರೆ ಅಫ್ಘಾನಿಸ್ಥಾನದಲ್ಲಿದ್ದಾರೆ ಎಂದು ನಾವು ಭಾವಿಸುತ್ತೇವೆ" ದಿನಪತ್ರಿಕೆಗೆ ನಿಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಹಮ್ಜಾ ಪ್ರಸ್ತುತ ಅಲ್ ಖೈದಾ ಸಂಘಟನೆಯ ಅತ್ಯುನ್ನತ ನಾಯಕ ಪಟ್ಟವನ್ನೇರಿದ್ದಾನೆ. ಆತ ತನ್ನ ತಂದೆಯ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಗುರಿ ಹೊಂದಿದ್ದಾನೆ ಎಂದು ಅವರು ಹೇಳಿದರು.
ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಅಬೋಟಾಬಾದ್ ನಲ್ಲಿ  2011 ರ ಮೇ 2 ರಂದು ಅಮೆರಿಕಾ ನಡೆಸಿದ್ದ ಮಿಲಿಟರಿ ದಾಳಿಯಲ್ಲಿ ಹತ್ಯೆಗೀಡಾಗಿದ್ದನು. ಹಮ್ಜಾ ಬಿನ್ ಲಾಡೆನ್, ಒಸಾಮಾನ ಪತ್ನಿಯಾದ  ಖೈರಯ ಸಬಾರ್ ಳ ಪುತ್ರನಾಗಿದ್ದಾನೆ.ಈಕೆ ಒಸಾಮಾನನ್ನು ಅಮೆರಿಕಾ ಪಡೆ ಹತ್ಯೆ ಮಾಡುವ ವೇಳೆ ಅಬೋಟಾಬಾದ್ ನಲ್ಲಿ ತನ್ನ ಪತಿಯ ಸಂಗಡ ವಾಸವಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com