ವಾಷಿಂಗ್ಟನ್: ಅಮೆರಿಕಾದ ಕನ್ಸಾಸ್ ನಲ್ಲಿ ಕಳೆದ ವರ್ಷ ಹೈದರಾಬಾದ್ ಎಂಜಿನೀಯರ್ ಶ್ರೀನಿವಾಸ ಕೂಚಿಬೊಟ್ಲಾ ಅವರನ್ನು ಗುಂಡಿಟ್ಟು ಕೊಂದಿದ್ದ ಅಪರಾಧಿಗೆ ಅಮೆರಿಕಾ ಫೆಡರಲ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
2017ರ ಫೆಬ್ರವರಿಯಲ್ಲಿ ಅಮೆರಿಕಾದ ಕನ್ಸಾಸ್ ನಗರದ ಆಸ್ಟೀನ್ ಬಾರ್ ನಲ್ಲಿ ಶ್ರೀನಿವಾಸ್ ಅವರನ್ನು ಹತ್ಯೆ ಮಾಡಲಾಗಿತ್ತು. ಘಟನೆಯಲ್ಲಿ ಮತ್ತೊಬ್ಬ ಭಾರತೀಯ ಕೂಡ ಗಾಯಗೊಂಡಿದ್ದರು. ಅಪರಾಧಿಗೆ ಪೆರೋಲ್ ಇಲ್ಲದೇ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.
ಆ್ಯಡಂ ಪ್ಯೂರಿಂಟನ್ ಕಳೆದ ಮಾರ್ಚ್ ನಲ್ಲಿ ತಪ್ಪೊಪ್ಪಿಕೊಂಡಿದ್ದ. ಅವರ ಬಣ್ಣ, ಧರ್ಮ ಮತ್ತು ರಾಷ್ಟ್ರೀಯತೆಗಾಗಿ ತಾನು ಗುಂಡು ಹಾರಿಸಿದ್ದಾಗಿ ಅಪರಾಧಿ ಪ್ಯೂರಿಂಟನ್ ತಪ್ಪೊಪ್ಪಿಕೊಂಡಿದ್ದ,